ಜಿಮ್ ವರ್ಕ್ಔಟ್ ವೇಳೆ ಹುಷಾರ್; ಈ ಯುವತಿಗಾದ ಗತಿ ನೋಡಿ
ನೀವು ಸಾಮಾಜಿಕ ಮಾಧ್ಯಮದಲ್ಲಿ ಜಿಮ್ ಅಪಘಾತಗಳ ಹಲವಾರು ವೀಡಿಯೊಗಳನ್ನು ನೋಡಿರಬಹುದು. ಕೆಲವು ಅಪಾಯಕಾರಿಯಾಗಿದ್ದು, ಜಿಮ್‌ಗೆ ಕಾಲಿಡುವ ಮೊದಲು ಜನರು ಎರಡು ಬಾರಿ ಯೋಚಿಸುವಂತೆ ಮಾಡುತ್ತವೆ. ಇತ್ತೀಚೆಗೆ, ಅಂತಹ ಒಂದು ವೀಡಿಯೊ ವೈರಲ್ ಆಗಿದ್ದು, ಅನೇಕರನ್ನು ಆಘಾತಗೊಳಿಸಿದೆ. ಈ ವೀಡಿಯೊದಲ್ಲಿ, ಯುವತಿಯೊಬ್ಬಳು ಭಾರವಾದ ಬಾರ್‌ಬೆಲ್ ಅನ್ನು ಎತ್ತಲು ಪ್ರಯತ್ನಿಸುತ್ತಾಳೆ. ಆದರೆ ಕೆಲವೇ ಸೆಕೆಂಡುಗಳಲ್ಲಿ, ಅನಿರೀಕ್ಷಿತ ಅಪಘಾತ ಸಂಭವಿಸುತ್ತದೆ. ಈ ವಿಡಿಯೋ ನೋಡಿ.
ನವದೆಹಲಿ, ನವೆಂಬರ್ 20: ಜಿಮ್ನಲ್ಲಿ ವರ್ಕ್ಔಟ್ ಮಾಡುವಾಗ ಕೊಂಚ ಎಚ್ಚರ ತಪ್ಪಿದರೂ ಅಥವಾ ಕೆಲವೊಮ್ಮೆ ಎಷ್ಟೇ ಜಾಗರೂಕರಾಗಿದ್ದರೂ ಅವಘಡಗಳು ಸಂಭವಿಸಿಬಿಡುತ್ತವೆ. ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಭಾರವಾದ ಬಾರ್‌ಬೆಲ್ ಅನ್ನು ಎತ್ತಲು ಪ್ರಯತ್ನಿಸುತ್ತಾಳೆ. ಆದರೆ, ಬ್ಯಾಲೆನ್ಸ್ ತಪ್ಪಿ ಅದು ಆಕೆಯ ಕುತ್ತಿಗೆ ಮೇಲೆ ಬೀಳುತ್ತದೆ. ಇದರಿಂದ ಆಕೆ ಮೂರ್ಛೆ ತಪ್ಪಿ ಬೀಳುತ್ತಾಳೆ. ತಕ್ಷಣ ಅಲ್ಲಿದ್ದ ಮೇಲ್ವಿಚಾರಕರು ಕಿರುಚುತ್ತಾ ಓಡಿಬರುತ್ತಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ