AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್? ಹೊರ್ಮುಜ್ ಆಳದಲ್ಲಿರುವ ಅಂತರ್ಜಾಲ ಕೇಬಲ್​ಗೂ ಆಪತ್ತು

ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್? ಹೊರ್ಮುಜ್ ಆಳದಲ್ಲಿರುವ ಅಂತರ್ಜಾಲ ಕೇಬಲ್​ಗೂ ಆಪತ್ತು

ಗಣಪತಿ ಶರ್ಮಾ
|

Updated on: May 19, 2026 | 2:36 PM

Share

ಇರಾನ್-ಅಮೆರಿಕಾ ಯುದ್ಧದ ಬಿಕ್ಕಟ್ಟಿನ ನಡುವೆ, ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಸಮುದ್ರದಾಳದ ಇಂಟರ್ನೆಟ್ ಕೇಬಲ್‌ಗಳಿಗೆ ಇರಾನ್ ಸುಂಕ ವಿಧಿಸಲು ಚಿಂತನೆ ನಡೆಸುತ್ತಿದೆ. ಜಾಗತಿಕ ಇಂಟರ್ನೆಟ್ ಸಂಚಾರದ ಶೇ 95 ಕ್ಕೂ ಹೆಚ್ಚು ಈ ಕೇಬಲ್‌ಗಳ ಮೂಲಕವೇ ನಡೆಯುತ್ತದೆ. ಇರಾನ್‌ನ ಈ ನಡೆ ಜಾಗತಿಕ ಇಂಟರ್ನೆಟ್‌ಗೆ ದೊಡ್ಡ ಅಡ್ಡಿಯಾಗುವ ಸಾಧ್ಯತೆಯಿದ್ದು, ಆರ್ಥಿಕ ಮತ್ತು ಡಿಜಿಟಲ್ ಸಂಪರ್ಕದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ನವದೆಹಲಿ, ಮೇ 19: ಇರಾನ್ ಮತ್ತು ಅಮೆರಿಕಾ ನಡುವಿನ ಯುದ್ಧ ಹಾಗೂ ಸದ್ಯದ ಬಿಕ್ಕಟ್ಟು ಜಗತ್ತಿನ ಇಂಟರ್ನೆಟ್‌ ಕಡಿತಕ್ಕೂ ಕಾರಣವಾಗುವ ಸಾಧ್ಯತೆ ಇದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಜಗತ್ತಿನ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಸಮುದ್ರದಾಳದಲ್ಲಿರುವ ಆಪ್ಟಿಕಲ್ ಫೈಬರ್ ಡೇಟಾ ಕೇಬಲ್‌ಗಳಿಗೆ ಸುಂಕ ವಿಧಿಸಲು ಇರಾನ್ ಚಿಂತನೆ ನಡೆಸುತ್ತಿದೆ. ಈ ಜಲಸಂಧಿಯು ಕೇವಲ ಕಚ್ಚಾ ತೈಲ ಸಾಗಣೆಯ ಮಾರ್ಗ ಮಾತ್ರವಲ್ಲದೆ, ಇಡೀ ಮಧ್ಯ ಪ್ರಾಚ್ಯದ ಡಿಜಿಟಲ್ ಮತ್ತು ಆರ್ಥಿಕ ಜೀವನಾಡಿಯಾಗಿದೆ. ಇಂಟರ್ನೆಟ್ ಕೇಬಲ್‌ಗಳ ಮೇಲೆ ಶುಲ್ಕ ವಿಧಿಸುವುದಾಗಿ ಇರಾನ್‌ನ ಸೇನಾ ವಕ್ತಾರ ಇಬ್ರಾಹಿಂ ಕಳೆದ ವಾರವೇ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.

ಜಗತ್ತಿನ ಶೇ 95 ಕ್ಕಿಂತ ಹೆಚ್ಚು ಇಂಟರ್ನೆಟ್ ಮತ್ತು ಡೇಟಾ ಸಂಪರ್ಕವು ಸಮುದ್ರದಾಳದಲ್ಲಿರುವ ಈ ಕೇಬಲ್‌ಗಳ ಮೂಲಕವೇ ನಡೆಯುತ್ತದೆ. ಇರಾನ್ ಹೊಸ ನಿಯಮಗಳನ್ನು ರೂಪಿಸುತ್ತಿದ್ದು, ಸಮುದ್ರದಾಳದ ಕೇಬಲ್‌ಗಳನ್ನು ನಿರ್ವಹಿಸಲು ಪರವಾನಿಗೆ ಮತ್ತು ಶುಲ್ಕ ಕಡ್ಡಾಯಗೊಳಿಸುತ್ತಿದೆ. ಅಂತರಾಷ್ಟ್ರೀಯ ನಿರ್ಬಂಧಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಇರಾನ್, ತನ್ನ ಭೌಗೋಳಿಕ ಗಡಿಯ ಲಾಭ ಪಡೆದು ಆದಾಯ ಗಳಿಸುವ ಮತ್ತು ಗಲ್ಫ್ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಉದ್ದೇಶ ಹೊಂದಿದೆ. ಶುಲ್ಕ ಪಾವತಿಸದಿದ್ದರೆ ಕೇಬಲ್‌ಗಳನ್ನು ಕಡಿತಗೊಳಿಸುವ ಬೆದರಿಕೆ ಇದೆ. ಇದು ಜಾಗತಿಕ ಇಂಟರ್ನೆಟ್, ಆನ್‌ಲೈನ್ ಸೇವೆಗಳು ಮತ್ತು ಬ್ಯಾಂಕಿಂಗ್ ವಹಿವಾಟಿಗೆ ಭಾರಿ ಅಡ್ಡಿಪಡಿಸಬಹುದು ಎಂಬ ಆತಂಕ ಎದುರಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More