ಗೋವಾ ಸಿಎಂ ಸಾವಂತ್ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತಿದೆ: ಡಿಕೆ ಶಿವಕುಮಾರ್

Updated on: Jul 24, 2025 | 1:49 PM

ಗೋವಾದ ಒಬ್ಬ ಎಂಪಿಗಾಗಿ ನಮ್ಮ ರಾಜ್ಯದ ಹಿತಾಸಕ್ತಿಯನ್ನು ಬಲಿಕೊಡುವಂತಿಲ್ಲ, ಇದು ನಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಹೇಳಿದ ಶಿವಕುಮಾರ್, ನಮ್ಮ ರಾಜ್ಯದ 28 ಸಂಸದರು ಮತ್ತು 12 ರಾಜ್ಯಸಭಾ ಸದಸ್ಯರು ಇನ್ನು ಸುಮ್ಮನಿರಕೂಡದು, ದೆಹಲಿಗೆ ಹೋದಾಗ ನಮ್ಮೆಲ್ಲ ಸಂಸದರನ್ನು ಭೇಟಿಯಾಗುತ್ತೇನೆ ಮತ್ತು ಸಾಧ್ಯವಾದರೆ ಕೇಂದ್ರ ಜಲಸಂಪನ್ಮೂಲ ಸಚಿವರನ್ನೂ ಭೇಟಿಯಾಗುತ್ತೇನೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಜುಲೈ 24: ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಲ್ಲ ಎಂದು ಗೋವಾದ ಸಿಎಂ ಪ್ರಮೋದ್ ಸಾವಂತ್ (Pramod Sawant) ಹೇಳಿರೋದು ಖಂಡನೀಯ, ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಮಹಾದಾಯಿ ನದಿ ನೀರು ಹಂಚಿಕೆ ಬಗ್ಗೆ ತೀರ್ಮಾನ ಆಗಿದೆ, ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಷಯವನ್ನು ಸೆಲಿಬ್ರೇಟ್ ಕೂಡ ಮಾಡಿದ್ದಾರೆ, ಕಳಸಾ ಬಂಡೂರಿ ಯೋಜನೆ ಕಾಮಗಾರಿಗಾಗಿ ಟೆಂಡರ್ ಕರೆಯಲಾಗಿದೆ, ಅರಣ್ಯ ಇಲಾಖೆಯಿಂದ ಕ್ಲೀಯರನ್ಸ್​ ಗಾಗಿ ಕಾಯುತ್ತಿದ್ದೇವೆ, ಸರ್ವೋಚ್ಛ ನ್ಯಾಯಾಲಯದಲ್ಲಿರುವ ನಮ್ಮ ಮನವಿಗಳನ್ನು ಹಿಂಪಡೆದು ಕೆಲಸ ಶುರುಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:   ಡಿಕೆ ಶಿವಕುಮಾರ್‌ಗೆ ಅನಾರೋಗ್ಯ: 3 ದಿನ ಸಾರ್ವಜನಿಕರ ಭೇಟಿ ಇಲ್ಲ, ಆಗಿದ್ದೇನು?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ