ತಿಪಟೂರು ನಗರ ಪೊಲೀಸ್ ಠಾಣೆಗೆ ಬಂದ ದೇವರು; ಕೆಂಪಮ್ಮ, ಚಿಕ್ಕಮ್ಮ, ಭೂತರಾಯ ದೇವರನ್ನ ಕರೆಸಿ ಪೂಜೆ; ವಿಡಿಯೋ ಇಲ್ಲಿದೆ

|

Updated on: May 31, 2023 | 1:21 PM

ಜಿಲ್ಲೆಯ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಪೊಲೀಸ್ ಠಾಣೆ ಎದುರಿನ‌ ಹಳ್ಳಿಕಟ್ಟೆಯಿಂದ ಸಮವಸ್ತ್ರದಲ್ಲಿಯೇ ದೇವರನ್ನ ಹೊತ್ತು ತಂದು, ಕೆಂಪಮ್ಮ ದೇವಿ, ಚಿಕ್ಕಮ್ಮ ದೇವಿ, ಶ್ರೀ ಭೂತರಾಯ ದೇವರುಗಳಿಗೆ ವಿಶೇಷ ಪೂಜೆ ಮಾಡಲಾಯಿತು.

ತುಮಕೂರು: ಜಿಲ್ಲೆಯ ತಿಪಟೂರು ನಗರ ಪೊಲೀಸ್ ಠಾಣೆ (Tiptur City Police Station)ಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಪೊಲೀಸ್ ಠಾಣೆ ಎದುರಿನ‌ ಹಳ್ಳಿಕಟ್ಟೆಯಿಂದ ಸಮವಸ್ತ್ರದಲ್ಲಿಯೇ ದೇವರನ್ನ ಹೊತ್ತು ತಂದು, ಕೆಂಪಮ್ಮ ದೇವಿ, ಚಿಕ್ಕಮ್ಮ ದೇವಿ, ಶ್ರೀ ಭೂತರಾಯ ದೇವರುಗಳಿಗೆ ವಿಶೇಷ ಪೂಜೆ ಮಾಡಲಾಯಿತು. ಇಡೀ ದಿನ ಪೊಲೀಸ್ ಠಾಣೆಯಲ್ಲಿ ವಿಶೇಷ ಅಲಂಕಾರ, ಪೂಜೆ ಪುನಸ್ಕಾರ ನೆರವೆರಲಿದ್ದು, ಠಾಣೆಯಲ್ಲೆ ದೇವರನ್ನ ಕುರಿಸಿ, ಆರತಿ, ಎಡೆ ಸೇವೆಯನ್ನ ಪೊಲೀಸರು ನೇರವೇರಿಸಿದರು. ಇನ್ನು ಇದೇ ವೇಳೆ ಸಾರ್ವಜನಿಕರಿಗೆ ಪಾನಕ ಫಲಹಾರ ವ್ಯವಸ್ಥೆ ಮಾಡಲಾಗಿತ್ತು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ