Hasanamba Darshan Live: 4ನೇ ದಿನದ ಹಾಸನಾಂಬ ದೇವಿ ದರ್ಶನ​​ ಲೈವ್​

| Updated By: ವಿವೇಕ ಬಿರಾದಾರ

Updated on: Oct 28, 2024 | 9:08 AM

ಗುರುವಾರ (ಅಕ್ಟೋಬರ್​ 24) ರಂದು ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಯಿತು. ನಾಲ್ಕನೇ ದಿನವಾದ ಇಂದು (ಅ.28) ಹಾಸನಾಂಬ ದೇವಿ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಭಕ್ತರು ನಸುಕಿನ ಜಾವ 4 ಗಂಟೆಯಿಂದ ದರ್ಶನಕ್ಕೆ ಪಡೆಯುತ್ತಿದ್ದಾರೆ. ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಹಾಸನಾಂಬ ದೇವಿ ದರ್ಶನಕ್ಕೆ ನಾಲ್ಕನೇ ದಿನ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ಹಾಸನಾಂಬ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಅ.24) ಸಂಜೆ 4 ಗಂಟೆಗೆ ಹಾಸನಾಂಬೆ ದರ್ಶನ ಪಡೆಯಲಿದ್ದಾರೆ. ಮುಖ್ಯಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸಾಥ್ ನೀಡಲಿದ್ದಾರೆ.