ಮೋಕ್ಷಿತಾ ಪೈ ಹಳೇ ಕೇಸ್ ಬಗ್ಗೆ ಗೋಲ್ಡ್ ಸುರೇಶ್ ಹೇಳಿದ್ದೇನು?
ಮೋಕ್ಷಿತಾ ಪೈ ಅವರು ಅಪಹರಣದ ಕೇಸ್ನಲ್ಲಿ ಸಿಲುಕಿಕೊಂಡಿದ್ದರು ಎಂಬ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ಆ ಬಗ್ಗೆ ಗೋಲ್ಡ್ ಸುರೇಶ್ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಿಂದ ಗೋಲ್ಡ್ ಸುರೇಶ್ ಅವರು ಅನಿವಾರ್ಯ ಕಾರಣದಿಂದ ಹೊರಗೆ ಬಂದಿದ್ದು, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳ ಹಳೇ ಕೇಸ್ಗಳನ್ನು ಕೆಲವರು ಮತ್ತೆ ಕೆದಕುತ್ತಿದ್ದಾರೆ. ಅಂಥವರ ಬಗ್ಗೆ ಗೋಲ್ಡ್ ಸುರೇಶ್ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಕಿಡ್ನಾಪ್ ಕೇಸ್ನಲ್ಲಿ ಮೋಕ್ಷಿತಾ ಹೆಸರು ತಣುಕು ಹಾಕಿಕೊಂಡಿತ್ತು. ಆ ವಿಚಾರವನ್ನು ಮತ್ತೆ ಮುನ್ನೆಲೆಗೆ ತರಲಾಗಿದೆ. ‘ಕೆಲಸ ಇಲ್ಲದವರು ಕಮೆಂಟ್ ಮಾಡುತ್ತಾರೆ. ಕಮೆಂಟ್ ಓದುವುದು ನಮ್ಮ ಕೆಲಸ ಅಲ್ಲ. ಕಮೆಂಟ್ ಮಾಡುವವರು ಅಲ್ಲೇ ಇರುತ್ತಾರೆ. ಕೆಲಸ ಮಾಡುವವರು ಮುಂದೆ ಹೋಗುತ್ತಾರೆ’ ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 19, 2024 08:39 PM
Latest Videos