ಈ ಸರ್ಕಾರಿ ಶಾಲೆಯ ಮಕ್ಕಳಿಗೆ ತಟ್ಟೆಯ ಬದಲು ಹಳೇ ಪೇಪರ್‌ನಲ್ಲಿ ಬಿಸಿಯೂಟ!
ಮಧ್ಯಪ್ರದೇಶದ ಶಿಯೋಪುರದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ತಟ್ಟೆಗಳ ಬದಲಿಗೆ ಹಳೇ ಪೇಪರ್‌ನಲ್ಲಿ ಊಟ ಬಡಿಸಲಾಗುತ್ತಿದೆ. ಈ ವಿಡಿಯೋ ವೈರಲ್ ಆಗಿದೆ. ಈ ವಿಷಯ ಬೆಳಕಿಗೆ ಬಂದ ನಂತರ, ಶಿಯೋಪುರ್ ಜಿಲ್ಲಾಧಿಕಾರಿ ಅರ್ಪಿತ್ ವರ್ಮಾ ತಕ್ಷಣದ ತನಿಖೆಗೆ ಆದೇಶಿಸಿದ್ದಾರೆ. ಆ ಶಾಲೆಯ ಪ್ರಾಂಶುಪಾಲರಿಗೆ ಶೋ-ಕಾಸ್ ನೋಟಿಸ್ ಸಹ ನೀಡಲಾಗಿದೆ.
ಭೋಪಾಲ್, ನವೆಂಬರ್ 7: ಸರ್ಕಾರಿ ಶಾಲಾ ಮಕ್ಕಳು ತಟ್ಟೆಗಳ ಬದಲಿಗೆ ಹಳೇ ಪೇಪರ್‌ನಲ್ಲಿ ಮಧ್ಯಾಹ್ನದ ಊಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Video Viral) ಆಗುತ್ತಿದೆ. ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವಿಜಯಪುರ ಬ್ಲಾಕ್‌ನ ಹುಲ್ಪುರ್ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅವರು ಹಳೇ ಪೇಪರ್‌ನಲ್ಲಿ ಬಡಿಸಿದ ಊಟವನ್ನು ಮಾಡುತ್ತಿದ್ದಾರೆ. ಈ ರೀತಿ ಸ್ವಲ್ಪವೂ ಶುಚಿತ್ವವಿಲ್ಲದೆ, ಅಮಾನವೀಯವಾಗಿ ಮಕ್ಕಳ ಜೊತೆ ವರ್ತಿಸುತ್ತಿರುವ ಶಾಲಾ ಸಿಬ್ಬಂದಿಯ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಈ ವಿಷಯ ಬೆಳಕಿಗೆ ಬಂದ ನಂತರ, ಶಿಯೋಪುರ್ ಜಿಲ್ಲಾಧಿಕಾರಿ ಅರ್ಪಿತ್ ವರ್ಮಾ ತಕ್ಷಣದ ತನಿಖೆಗೆ ಆದೇಶಿಸಿದ್ದಾರೆ. ಆ ಶಾಲೆಯ ಪ್ರಾಂಶುಪಾಲರಿಗೆ ಶೋ-ಕಾಸ್ ನೋಟಿಸ್ ಸಹ ನೀಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ