ಸರ್ಕಾರ ಬೇಗ ಸುಗ್ರೀವಾಜ್ಞೆ ಜಾರಿಗೊಳಿಸಿ ಮೈಕ್ರೋ ಫೈನಾನ್ಸ್​ಗಳ ದುಂಡಾವರ್ತನೆ ತಡೆಗಟ್ಟಬೇಕು: ಜಿಟಿ ದೇವೇಗೌಡ

Updated on: Feb 01, 2025 | 3:17 PM

ಸುಗ್ರೀವಾಜ್ಞೆ ಜಾರಿಗೊಳಿಸಿದ ಬಳಿಕ ಸರ್ಕಾರ ಪೊಲೀಸರನ್ನು ಹದ್ದುಬಸ್ತಿನಲ್ಲಿಡುವುದು ಬಹಳ ಮುಖ್ಯ, ಅದರ ನೆಪದಲ್ಲಿ ಕಾನೂನು ರಕ್ಷಕರು ನ್ಯಾಯಯುತವಾಗಿ ನಡೆಯುತ್ತಿರುವ ಹಣಕಾಸು ಸಂಸ್ಥೆಗಳ ಮೇಲೂ ಶಕ್ತಿ ಪ್ರದರ್ಶನ ನಡೆಸುವ ಸಾಧ್ಯತೆ ಇರುತ್ತದೆ, ಸುಗ್ರೀವಾಜ್ಞೆಯ ಸದ್ಬಳಕೆಯಾಗಬೇಕೇ ಹೊರತು ಯಾವ ಕಾರಣಕ್ಕೂ ದುರ್ಬಳಕೆಯಾಗಬಾರದು ಎಂದು ದೇವೇಗೌಡ ಹೇಳಿದರು.

ಮೈಸೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿ ಕೊರೋನಾದ ಹಾಗೆ ಹಬ್ಬುತ್ತಿದೆ, ಸರ್ಕಾರ ಆದಷ್ಟು ಬೇಗ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿ ಬಡವರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ರೈತರಿಗೆ ನೆರವಾಗಬೇಕೆಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದರು. ಕೇಂದ್ರ ಸರ್ಕಾರವೂ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಹೇಳಿದ ಮಾಜಿ ಸಚಿವ, ಮೈಕ್ರೋ ಫೈನಾನ್ಸ್​ನವರು ಬಡವರಿಂದ ಬಡ್ಡಿ ಮತ್ತು ಚಕ್ರಬಡ್ಡಿಯನ್ನು ವಸೂಲು ಮಾಡುತ್ತಿವೆ, ಸಾಲ ವಸೂಲಾತಿಗೆ ಗೂಂಡಾಗಳನ್ನು ನೇಮಿಸುವ ಕೆಲಸ ನಡೆದಿದೆ, ಅವರು ಸಾಲಗಾರರ ಮೇಲೆ ದೌರ್ಜನ್ಯ ನಡೆಸುತ್ತಿರುವುದರಿಂದ ಜನ ಹೆದರುತ್ತಿದ್ದಾರೆ ಎಂದು ದೇವೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಬ್ರೇಕ್, ಸುಗ್ರೀವಾಜ್ಞೆ ತರಲು ಸಿದ್ದರಾಮಯ್ಯ ಸಂಪುಟ ಒಪ್ಪಿಗೆ