ಸರ್ಕಾರದಲ್ಲಿ ನವೆಂಬರ್ ತಿಂಗಳು ಬದಲಾವಣೆ ನಿಶ್ಚಿತ, ಅದು ಭಾರೀ ಬದಲಾವಣೆಯೇನೂ ಆಗಿರಲ್ಲ: ಸತೀಶ್ ಜಾರಕಿಹೊಳಿ

Updated on: Jun 26, 2025 | 12:39 PM

ಬದಲಾವಣೆ ಯಾವ ವಿಧದಲ್ಲಿ ಅನ್ನೋದನ್ನು ಸಚಿವ ಜಾರಕಿಹೊಳಿ ಹೇಳಲಿಲ್ಲ. ಬೆಳಗಾವಿಯಲ್ಲಿ ಆಗುತ್ತಿರುವ ಮಳೆಯ ಬಗ್ಗೆ ಅಪ್ಡೇಟ್ ಕೇಳಿದಾಗ ಅವರು ಜಿಲ್ಲೆಯಾದ್ಯಂತ ಮಳೆಯೇನೂ ಆಗುತ್ತಿಲ್ಲ, ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಾತ್ರ ಜೋರಾಗಿ ಮಳೆಯಾಗಿದೆ, ಜಿಲ್ಲಾಧಿಕಾರಿ ಮಳೆಯನ್ನು ಮಾನಿಟರ್ ಮಾಡುತ್ತಿದ್ದಾರೆ, ಅಗತ್ಯವಿದ್ದಲ್ಲಿ ಕ್ರಮಗಳನ್ನು ತೆಗದುಕೊಳ್ಳುತ್ತಾರೆ ಎಂದರು.

ಬೆಂಗಳೂರು, ಜೂನ್ 26: ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಎರಡು ದಿನಗಳ ದೆಹಲಿ ಪ್ರವಾಸ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಜೊತೆ ಜಾರಕಿಹೊಳಿ ಕೂಡ ಇದ್ದರು. ಸರ್ಕಾರದಲ್ಲಿ ಏನಾದರೂ ಬದಲಾವಣೆಗಳು ಆಗಲಿವೆಯಾ ಮುಂಬರುವ ದಿನಗಳಲ್ಲಿ ಅಂತ ಕೇಳಿದಾಗ ಸಚಿವ ಕೂಡಲೇ ಪ್ರತಿಕ್ರಿಯೆ ನೀಡಲಿಲ್ಲ, ಒಂದಷ್ಟು ಯೋಚನಾಮಗ್ನರಾದರು. ಪ್ರಶ್ನೆ ಅನಿರೀಕ್ಷೀತಾವಾಗೇನೂ ಇರಲಿಲ್ಲ. ನವೆಂಬರ್​ನಲ್ಲಿ ಬದಲಾವಣೆ ಆಗೋದು ನಿಜ, ಆದರೆ ಮಾಧ್ಯಮದವರು ಭಾವಿಸಿರುವಂತೆ ಭಾರೀ ಬದಲಾವಣೆಯೇನೂ ಆಗಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ:ಸಿಎಂ ಮತ್ತು ಡಿಸಿಎಂರಂತೆ ದೆಹಲಿಯಲ್ಲಿರುವ ಸತೀಶ್ ಜಾರಕಿಹೊಳಿ ತಾನು ಬಂದಿರೋ ಕಾರಣ ಬೇರೆ ಎಂದರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ