ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್ ಗೆಹ್ಲೋಟ್​​​ ತಡೆದು ಹೈಡ್ರಾಮಾ

Edited By:

Updated on: Jan 22, 2026 | 12:18 PM

ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಗೆಹ್ಲೋಟ್ ಅವರು ಸರ್ಕಾರ ನೀಡಿದ ಭಾಷಣವನ್ನು ಓದದೆ ಕೇವಲ ಶುಭಾಶಯ ಕೋರಿ ತೆರಳಿದರು. ಈ ಅನಿರೀಕ್ಷಿತ ನಡೆಗೆ ಸದನದಲ್ಲಿ ತೀವ್ರ ಹೈಡ್ರಾಮಾ ಸೃಷ್ಟಿಯಾಯಿತು. ಕಾಂಗ್ರೆಸ್ ಶಾಸಕರು ಧಿಕ್ಕಾರ ಘೋಷಣೆಗಳನ್ನು ಮೊಳಗಿಸಿದರೆ, ಬಿ.ಕೆ. ಹರಿಪ್ರಸಾದ್ ರಾಜ್ಯಪಾಲರನ್ನು ಅಡ್ಡಗಟ್ಟಿ ಭಾಷಣ ಓದುವಂತೆ ಪಟ್ಟು ಹಿಡಿದರು.

ಬೆಂಗಳೂರು, ಜನವರಿ 22: ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲ ಗೆಹ್ಲೋಟ್ ಅವರು ಸರ್ಕಾರ ನೀಡಿದ್ದ ಭಾಷಣವನ್ನು ಓದದೆ ಕೇವಲ ಎರಡೇ ಮಾತುಗಳಲ್ಲಿ ಶುಭಾಶಯ ಕೋರಿ ಹೊರನಡೆದ ಘಟನೆ ಸದನದಲ್ಲಿ ಭಾರೀ ಹೈಡ್ರಾಮಾಗೆ ಕಾರಣವಾಯಿತು. ರಾಜ್ಯಪಾಲರ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕರು, ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಈ ಅನಿರೀಕ್ಷಿತ ನಡೆಯಿಂದ ಆಘಾತಕ್ಕೊಳಗಾದ ಶಾಸಕ ಬಿ.ಕೆ. ಹರಿಪ್ರಸಾದ್ ಅವರು, ರಾಜ್ಯಪಾಲರು ಹೊರಡುತ್ತಿದ್ದ ಸಂದರ್ಭದಲ್ಲಿ ಅವರನ್ನು ಅಡ್ಡಗಟ್ಟಿ ಸಂಪೂರ್ಣ ಭಾಷಣ ಓದುವಂತೆ ಪಟ್ಟು ಹಿಡಿದರು. ಆದರೆ, ರಾಜ್ಯಪಾಲ ಗೆಹ್ಲೋಟ್ ಅವರು ಇದನ್ನು ಲೆಕ್ಕಿಸದೆ ತಮ್ಮ ಪೂರ್ವ ನಿರ್ಧಾರದಂತೆ ಸದನದಿಂದ ಹೊರನಡೆದರು. ಮುಖ್ಯಮಂತ್ರಿಗಳು, ಸ್ಪೀಕರ್, ಸಭಾಪತಿಗಳು ಮತ್ತು ಕಾನೂನು ಸಚಿವರು ಗೌರವಾರ್ಥವಾಗಿ ರಾಜ್ಯಪಾಲರನ್ನು ವಾಹನದವರೆಗೂ ಬೀಳ್ಕೊಟ್ಟರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.