ಬಿಗ್ಬಾಸ್ ಕನ್ನಡ ಸೀಸನ್ 11 ಫಿನಾಲೆ ವಾರಕ್ಕೆ ಎಂಟ್ರಿ ನೀಡಿದೆ. ಇದೇ ವಾರಾಂತ್ಯಕ್ಕೆ ಈ ಸೀಸನ್ನ ಫಿನಾಲೆ ನಡೆಯಲಿದೆ. ಬಿಗ್ಬಾಸ್ ಈ ಸೀಸನ್ನ ಕೊನೆಯ ವಾರದ ಪಂಚಾಯ್ತಿಯಲ್ಲಿ ಗೌತಮಿ ಮತ್ತು ಧನರಾಜ್ ಎಲಿಮಿನೇಟ್ ಆಗಿದ್ದಾರೆ. ಗೌತಮಿ ಅವರು ಫಿನಾಲೆಗೆ ಹೋಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಆಗಿಲ್ಲ. ಇದೀಗ ಹೊರಗೆ ಬಂದಿರುವ ಗೌತಮಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಉಗ್ರಂ ಮಂಜು ಅವರೊಟ್ಟಿಗಿನ ಗೆಳೆತನ, ಬೇರೆ ಇತರ ಜೊತೆಗಿನ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ಉಗ್ರಂ ಮಂಜು ಅವರ ಮನೆಯವರು ಬಂದು ತಮ್ಮ ಬಗ್ಗೆ ಮಂಜು ಬಳಿ ಆಡಿದ ಮಾತುಗಳ ಬಗ್ಗೆ ಗೌತಮಿ ತುಸು ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಪತಿ ಮನೆಗೆ ಬಂದಾಗ ಅವರು ಅದೇ ವಿಷಯವನ್ನು ಹೇಳಿದ ರೀತಿಗೂ ಮಂಜು ಮನೆಯವರು ಹೇಳಿದ ರೀತಿಗೂ ವ್ಯತ್ಯಾಸವಿದೆ ಎಂದು ಗೌತಮಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ