ಹೆಜ್ಜಾರ್ಲೆ ಪಕ್ಷಿಗೆ ಜಿಪಿಎಸ್ ಅಳವಡಿಕೆ; ಐತಿಹಾಸಿಕ ದಿನಕ್ಕೆ ಸಾಕ್ಷಿಯಾದ ಬೆಳ್ಳೂರು ಪಕ್ಷಿಧಾಮ

| Updated By: Rakesh Nayak Manchi

Updated on: Sep 10, 2022 | 1:07 PM

ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಹೆಜ್ಜಾರ್ಲೆ ಪಕ್ಷಿ(Hejjarle Bird)ಗೆ ಟ್ರ್ಯಾಕರ್ ಅಳವಡಿಕೆ ಮಾಡಲಾಗಿದೆ. ಆ ಮೂಲಕ ಮಂಡ್ಯದ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಪಕ್ಷಿಧಾಮವು ಐತಿಹಾಸಿಕ ದಿನಕ್ಕೆ ಸಾಕ್ಷಿಯಾಯ್ತು.

ಮಂಡ್ಯ: ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಪಕ್ಷಿಧಾಮವು  ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಿದೆ. ಪೆಲಿಕಾನ್ ಹಕ್ಕಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಕೆ ಮೂಲಕ ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಿದೆ. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಹೆಜ್ಜಾರ್ಲೆ ಪಕ್ಷಿ(Hejjarle Bird)ಗೆ ಟ್ರ್ಯಾಕರ್ ಅಳವಡಿಕೆ ಮಾಡಲಾಗಿದ್ದು, ಹೆಜ್ಜಾರ್ಲೆ ಪಕ್ಷಿ ಯಾವ ದೇಶಕ್ಕೆ ಸಂಚರಿಸುತ್ತೆ ಎಲ್ಲಿ ತಂಗುತ್ತೆ ಅದರ ಚಟುವಟಿಕೆಗಳ ಇಂಚಿಂಚೂ ಮಾಹಿತಿಯ ಟ್ರ್ಯಾಕಿಂಗ್ ಮಾಡಲು ಇದು ಸಹಕಾರಿಯಾಗಲಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ