IIT ಉದ್ಘಾಟಿಸಿದ ಪ್ರಧಾನಿ ಮೋದಿಗೆ ಆರತಿ ಬೆಳಗಿದ ಅಜ್ಜಿ
ಧಾರವಾಡದಲ್ಲಿ ನಿರ್ಮಿಸಲಾಗಿರುವ ಐಐಟಿ ನೂತನ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡುತ್ತಿದ್ದಂತೆ ಅಜ್ಜಿ ಒಬ್ಬರು ವೇದಿಕೆ ಎದುರಿಗೆ ನಿಂತು ಮೋದಿಗೆ ಆರತಿ ಬೆಳಗಿದರು.
ಧಾರವಾಡ: ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಇಂದು ಬೆಂಗಳೂರು-ಮೈಸೂರು ಹೈವೇ ಉದ್ಘಾಟಿಸಿದರು. ನಂತರ ಧಾರವಾಡದಲ್ಲಿ ನಿರ್ಮಿಸಲಾಗಿರುವ ಐಐಟಿ ನೂತನ ಕಟ್ಟಡ ಉದ್ಘಾಟನೆ ಮಾಡಿದರು. ಈ ವೇಳೆ ಐಐಟಿ ಉದ್ಘಾಟನೆ ಆಗುತ್ತಿದ್ದಂತೆಯೇ ಪ್ರಧಾನಿ ಮೋದಿಗೆ ಅಜ್ಜಿ (Grandmother) ಒಬ್ಬರು ವೇದಿಕೆ ಎದುರಿಗೆ ನಿಂತು ಆರತಿ ಬೆಳಗಿದ್ದಾರೆ. ಧಾರವಾಡ ತಾಲೂಕಿನ ಬೇಲೂರ ಗ್ರಾಮದ ಸುಭದ್ರಮ್ಮ ಚಿಕ್ಕಮಠ ಎಂಬುವವರು ಆರತಿ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Mar 12, 2023 08:47 PM
Latest Videos