ಬೆಂಗಳೂರು: ರವಿವಾರ ಪ್ರಧಾನ ಮೋದಿ ನರೇಂದ್ರ ಮೋದಿಯವರ ಸಕ್ಕರೆ ನಾಡು ಮಂಡ್ಯ ಭೇಟಿ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ಲಕ್ಷಣಗಳು ಕಾಣುತ್ತಿವೆ. ನಿನ್ನೆ ಅವರಿಗೆ ಸಿಕ್ಕಿದ್ದು ಅಭೂತಪೂರ್ವ ಸ್ವಾಗತ. ಲಕ್ಷಗಟ್ಟಲೆ ಜನ ಪ್ರಧಾನಿಗಳನ್ನು ನೋಡಲು ಸೇರಿದ್ದರು. ಮಂಡ್ಯ ಜಿಲ್ಲೆ ಯಾವತ್ತಿಗೂ ಜೆಡಿಸ್ ಭದ್ರಕೋಟೆ, ಅದನ್ನು ಭೇದಿಸಲು ಕಾಂಗ್ರಸ್ ನಿಂದಲೂ ಸಾಧ್ಯವಾಗಿಲ್ಲ ಮತ್ತು ಈ ಭಾಗದಲ್ಲಿ ಬಿಜೆಪಿ ಸದಾ ಡಿಸ್ಟಂಟ್ ಥರ್ಡ್ ಪ್ಲೇಸ್ ನಲ್ಲಿದೆ. ಕಾಂಗ್ರೆಸ್ ಈ ಬಾರಿ ಜೆಡಿಎಸ್ ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವುದಾಗಿ ಹೇಳಿಕೊಳ್ಳುತ್ತಿದೆ. ಜೆಡಿಎಸ್ ನಾಯಕರು ಕಾಂಗ್ರೆಸ್ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ. ಆದರೆ, ಪ್ರಧಾನಿ ಮೋದಿಯವರ ಭೇಟಿ ಮತ್ತು ಸ್ಥಳೀಯ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ಘೋಷಿಸಿರುವುದು ಈ ಬಾರಿಯ ವಿಧಾನಸಬಾ ಚುನಾವಣೆಯಲ್ಲಿ ಎರಡೂ ಪಕ್ಷಗಳ ನಿರೀಕ್ಷೆಗಳಿಗೆ ಕಂಟಕವಾದರೆ ಆಶ್ಚರ್ಯವಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ