Karnataka Assembly Election: ಮತಗಟ್ಟೆ ಮುಂದೆ ಧರಣಿ ಕುಳಿತ ಅಜ್ಜಿ; ಕಾರಣವೇನು? ಇಲ್ಲಿದೆ ನೋಡಿ

| Updated By: Digi Tech Desk

Updated on: May 11, 2023 | 5:10 PM

ಜಿಲ್ಲೆಯ ಮುಂಡರಗಿ ಪಟ್ಟಣದ ಮತಗಟ್ಟೆ ಸಂಖ್ಯೆ 53ರಲ್ಲಿ 85 ವರ್ಷದ ಅಜ್ಜಿ ಮತಗಟ್ಟೆಯ ಮುಂದೆ ಧರಣಿ ಕುಳಿತ ಘಟನೆ ನಡೆದಿದೆ. ಹೌದು ತಾನು ತೋರಿಸಿದ ಚಿಹ್ನೆಗೆ ಮತ ಹಾಕಿಲ್ಲವೆಂದು ಅಧಿಕಾರಿಗಳ ವಿರುದ್ದ ಆರೋಪಿಸಿ, ತಹಶೀಲ್ದಾರ ಸೇರಿದಂತೆ ಹಿರಿಯ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದಾಳೆ.

ಗದಗ: ವಿಧಾನಸಭೆ ಚುನಾವಣೆ(Karnataka Assembly Election) ಮತದಾನ ಪ್ರಕ್ರಿಯೆ ಇಂದು(ಮೇ.10) ಬೆಳಿಗ್ಗೆಯಿಂದ ಭರ್ಜರಿಯಾಗಿ ಜರುಗುತ್ತಿದೆ. ಹೊಸ ಮತದಾರರಿಂದ ಹಿಡಿದು, 95 ರ ಅಜ್ಜಿಯವರೆಗೂ ಎಲ್ಲರೂ ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತಿದ್ದಾರೆ. ಆದರೆ, ಜಿಲ್ಲೆಯ ಮುಂಡರಗಿ ಪಟ್ಟಣದ ಮತಗಟ್ಟೆ ಸಂಖ್ಯೆ 53ರಲ್ಲಿ 85 ವರ್ಷದ ಮುಕ್ತುಂಬೀ ದೊಡ್ಡಮನಿ ಎನ್ನುವ ಅಜ್ಜಿಯೊಬ್ಬರು ಮೊಮ್ಮಗನ ಜೊತೆಗೆ ಮತದಾನಕ್ಕೆ ಆಗಮಿಸಿದ್ದರು. ಈ ವೇಳೆ ಮತ ಚಲಾಯಿಸಲು ಮೊಮ್ಮಗನನ್ನು ಅಜ್ಜಿಯ ಜೊತೆಗೆ ಅಧಿಕಾರಿಗಳು ಬಿಟ್ಟಿಲ್ಲ. ಕೊನೆಗೆ ಅಜ್ಜಿ ತೋರಿಸಿದ ಚಿಹ್ನೆಗೂ ಮತವನ್ನು ಅಧಿಕಾರಿಗಳು ಹಾಕದೇ ಬೇರೆ ಗುರುತಿಗೆ ಮತವನ್ನು ಹಾಕಿದ್ದಾರೆ ಎಂದು ಆರೋಪಿಸಿ ಮತಗಟ್ಟೆ ಮುಂದೆ ಧರಣಿ ಕುಳಿತಿದ್ದಾಳೆ. ತಹಶೀಲ್ದಾರ ಸೇರಿದಂತೆ ಹಿರಿಯ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದಾಳೆ.

ಕರ್ನಾಟಕ ಚುನಾವಣೆ 2023 ಲೈವ್​ ಅಪ್ಡೇಟ್ಸ್​

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

Published on: May 10, 2023 10:57 AM