ಗ್ರಾಮಸ್ಥರು ಸಮಸ್ಯೆ ಹೇಳಿಕೊಳ್ಳುತ್ತಿದ್ದಂತೆಯೇ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ ಕಾರು ಬಿಟ್ಟು ಬೈಕ್ ಹತ್ತಿ ಪರಾರಿ
ನಿವಾಸಿಗಳು ಸಮಸ್ಯೆಗಳನ್ನು ಹೇಳಿಕೊಳ್ಳಲಾರಂಭಿಸುತ್ತಲೇ ಹಾರವನ್ನು ಕಿತ್ತೊಗೆಯುವ ಶಾಸಕರು ತಮ್ಮ ಕಾರನ್ನು ಅಲ್ಲೇ ಬಿಟ್ಟು ಬೈಕೊಂದರ ಮೇಲೆ ಪರಾರಿಯಾಗುತ್ತಾರೆ! .
ತುಮಕೂರು: ಗುಬ್ಬಿ ಕ್ಷೇತ್ರದ ಜೆಡಿ(ಎಸ್) ಶಾಸಕ ಎಸ್ ಆರ್ ಶ್ರೀನಿವಾಸ (SR Srinivas) ಶನಿವಾರದಂದು ಜನ ಪ್ರತಿನಿಧಿಯೆಂಬ ಗೌರವಕ್ಕೆ ಕಳಂಕ ತರುವ ರೀತಿಯಲ್ಲಿ ವರ್ತಿಸಿದ್ದಾರೆ. ಗುಬ್ಬಿ (Gubbi) ತಾಲ್ಲೂಕಿನ ಯಕ್ಕಲಕಟ್ಟೆ (Yakkalkatte) ಹೆಸರಿನ ಗ್ರಾಮದ ಬಳಿ ಉಣಗನಾಲ ಗ್ರಾಮದ ನಿವಾಸಿಗಳು ಅವರ ಕಾರನ್ನು ನಿಲ್ಲಿಸಿ ಹೂಮಾಲೆಯಿಂದ ಅವರನ್ನು ಸತ್ಕರಿಸಿ ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ನಿವಾಸಿಗಳು ಸಮಸ್ಯೆಗಳನ್ನು ಹೇಳಿಕೊಳ್ಳಲಾರಂಭಿಸುತ್ತಲೇ ಹಾರವನ್ನು ಕಿತ್ತೊಗೆಯುವ ಶಾಸಕರು ತಮ್ಮ ಕಾರನ್ನು ಅಲ್ಲೇ ಬಿಟ್ಟು ಬೈಕೊಂದರ ಮೇಲೆ ಪರಾರಿಯಾಗುತ್ತಾರೆ! .