ವಿಧಾನಸೌಧದ ಮುಂದೆ ಸಲ್ಲೇಖನ ವ್ರತ: ಕಣ್ಣೀರಿಡುತ್ತಲ್ಲೇ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಜೈನ ನಿಗಮ ಸ್ಥಾಪನೆ ವಿಳಂಬವಾಗಿರುವ ಈ ಹಿನ್ನೆಲೆಯಲ್ಲಿ ಜೈನ ಮುನಿ ಗುಣಧರನಂದಿ ಸ್ವಾಮೀಜಿ ಕಣ್ಣೀರು ಹಾಕಿರುವ ಪ್ರಸಂಗ ನಡೆದಿದೆ. ಹುಬ್ಬಳ್ಳಿಯ ವರೂರಿನಲ್ಲಿ ಮಾತನಾಡಿದ ಜೈನ ಮುನಿ ಗುಣಧರನಂದಿ ಸ್ವಾಮೀಜಿ, ಜೈನ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪನೆ ಸೇರಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಸುವ ಭರವಸೆ ನೀಡಿತ್ತು. ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಭರವಸೆ ನೀಡಿತ್ತು. ಆದರೆ, ಈವರೆಗೆ 3 ಬೇಡಿಕೆಗಳು ಮಾತ್ರ ಈಡೇರಿವೆ. ನಿಗಮ-ಮಂಡಳಿ ಸೇರಿ 4 ಬೇಡಿಕೆ ಬಾಕಿ ಉಳಿದಿವೆ. ಹಲವು ಸಲ ಮನವಿ ಮಾಡಿದರೂ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬೇಸರ ಹೊರಹಾಕಿದ್ದಾರೆ.
ಹುಬ್ಬಳ್ಳಿ, (ಮಾರ್ಚ್ 17): ಜೈನ ನಿಗಮ ಸ್ಥಾಪನೆ ವಿಳಂಬವಾಗಿರುವ ಈ ಹಿನ್ನೆಲೆಯಲ್ಲಿ ಜೈನ ಮುನಿ ಗುಣಧರನಂದಿ ಸ್ವಾಮೀಜಿ ಕಣ್ಣೀರು ಹಾಕಿರುವ ಪ್ರಸಂಗ ನಡೆದಿದೆ. ಹುಬ್ಬಳ್ಳಿಯ ವರೂರಿನಲ್ಲಿ ಮಾತನಾಡಿದ ಜೈನ ಮುನಿ ಗುಣಧರನಂದಿ ಸ್ವಾಮೀಜಿ, ಜೈನ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪನೆ ಸೇರಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಸುವ ಭರವಸೆ ನೀಡಿತ್ತು. ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಭರವಸೆ ನೀಡಿತ್ತು. ಆದರೆ, ಈವರೆಗೆ 3 ಬೇಡಿಕೆಗಳು ಮಾತ್ರ ಈಡೇರಿವೆ. ನಿಗಮ-ಮಂಡಳಿ ಸೇರಿ 4 ಬೇಡಿಕೆ ಬಾಕಿ ಉಳಿದಿವೆ. ಹಲವು ಸಲ ಮನವಿ ಮಾಡಿದರೂ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬೇಸರ ಹೊರಹಾಕಿದ್ದಾರೆ.
ಬುಧವಾರ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನ ಭೇಟಿ ಮಾಡಿ ನಿಗಮ-ಮಂಡಳಿ ರಚನೆಗೆ ಮನವಿ ಮಾಡುತ್ತೇವೆ. ಎಲ್ಲಾ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ. ಸರ್ಕಾರ ಬೇಡಿಕೆ ಈಡೇರಿಕೆಗೆ ನಿರ್ಲಕ್ಷ್ಯ ಮಾಡಿದರೆ ಜೂ.8ರಂದು ಐನಾಪೂರದಲ್ಲಿ ಸಮಾವೇಶ ಮಾಡುತ್ತೇವೆ. ನಿರ್ಲಕ್ಷ್ಯ ಮುಂದುವರಿಸಿದರೆ ವಿಧಾನಸೌಧದ ಎದುರು ಅನ್ನ, ನೀರು ತ್ಯಜಿಸಿ ಸಲ್ಲೇಖನ ವ್ರತ ಆರಂಭಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.