Karnataka Budget Session: ಯಾದಗಿರಿ ಜಿಲ್ಲೆ ಸಮಸ್ಯೆಗಳನ್ನು ಮಾರ್ಮಿಕವಾಗಿ ಸರ್ಕಾರದ ಗಮನಕ್ಕೆ ತಂದ ಶಾಸಕ ಶರಣಗೌಡ ಕಂದ್ಕೂರ್
ಯಾದಗಿರಿ ಜಿಲ್ಲೆಯಲ್ಲಿ ಬೇಸಿಗೆ ಕಾಲದ ಉಷ್ಣಾಂಶ 45-46 ಡಿಗ್ರೀ ಸೆಲ್ಸಿಯಸ್ ತಲುಪುತ್ತದೆ, ಜನ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ, ಈ ವರ್ಷ ಉಷ್ಣಾಂಶ ಮತ್ತಷ್ಟು ಹೆಚ್ಚಲಿದೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀರಿನ ಸಮಸ್ಯೆಯನ್ನು ವಿವರಿಸಿದ್ದೆ, ₹ 2,000 ಕೋಟಿ ಅನುದಾನ ಬಿಡುಗಡೆಯಾಗಿರುವ ಬಗ್ಗೆ ಅವರು ಹೇಳುತ್ತಾರೆ, ಜಿಲ್ಲೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಹಣವಿಲ್ಲ, ಸರ್ಕಾರ ಎಲ್ಲ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶರಣಗೌಡ ಕಂದ್ಕೂರ್ ಹೇಳಿದರು.
ಬೆಂಗಳೂರು, ಮಾರ್ಚ್ 19: ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ ಉತ್ತರ ಕರ್ನಾಟಕ ಭಾಗದ (north Karnataka) ಸಮಸ್ಯೆಗಳನ್ನು ಅತ್ಯಂತ ಮಾರ್ಮಿಕವಾಗಿ ಸದನದಲ್ಲಿ ಪ್ರಸ್ತಾಪಿಸಿದರು. ಕಡೇಚೂರ್-ಬಾಡಿಯಾಳ್ ಕೈಗಾರಿಕಾ ಪ್ರದೇಶದಲ್ಲಿ ತಲೆಯೆತ್ತಿರುವ ರಾಸಾಯನಿಕ ಘಟಕಗಳು ಹೊರಹಾಕುತ್ತಿರುವ ವಿಷಾನಿಲ ವಾತಾವರಣದಲ್ಲಿ ಬೆರೆತು ಜನ ಅದನ್ನೇ ಉಸಿರಾಡಿ ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಶಾಸಕ ಹೇಳಿದರು. ಸದನದಲ್ಲಿ ಮಾತಾಡುವ ಸದಸ್ಯರಿಗೆ ಉತ್ತರ ಕರ್ನಾಟಕ ಸಮಸ್ಯೆಗಳು ಅರ್ಥವಾಗಲ್ಲ, ಒಳ್ಳೊಳ್ಳೆ ಕಾರ್ಖಾನೆಗಳಿಗಾದರೆ ದಕ್ಷಿಣ ಕರ್ನಾಟಕ, ವಿಷಾನಿಲ ಸೂಸುವ ಫ್ಯಾಕ್ಟರಿಗಳಿಗಾದರೆ ಉತ್ತರ ಕರ್ನಾಟಕ, ಇದ್ಯಾವ ಸೀಮೆ ನ್ಯಾಯ ಸ್ವಾಮೀ ಎಂದು ಶಾಸಕ ಪ್ರಶ್ನಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಆಪರೇಷನ್ ಹಸ್ತದ ಭೀತಿ; ಪಕ್ಷದ ಶಾಸಕ, ಮುಖಂಡರೊಡನೆ ಸಭೆ ನಡೆಸಿದ ದೇವೇಗೌಡ ಮತ್ತು ಕುಮಾರಸ್ವಾಮಿ