Karnataka Budget Session; ಡಿಕೆ ಶಿವಕುಮಾರ್ ಹಾಗೆ ದಪ್ಪ ಇದ್ದಿದ್ರೆ ಖಂಡಿತ ನೀರಾ ಕುಡಿಯುತ್ತಿದ್ದೆ: ಕೋಟ ಶ್ರೀನಿವಾಸ ಪೂಜಾರಿ
Karnataka Budget Session: ನೀರಾ ಹೊತ್ತು ಏರುತ್ತಿದ್ದಂತೆ ಹೆಂಡವಾಗಿ ಮಾರ್ಪಡುತ್ತದೆ, ಅದನ್ನು ಕುಡಿದ ಬಳಿಕ ಏರುವ ಮತ್ತನ್ನು ತಾಳಿಕೊಳ್ಳುವ ದೇಹದಾರ್ಢ್ಯ ತನ್ನದಲ್ಲ, ಶಿವಕುಮಾರ್ ಅವರ ಹಾಗೆ ದಪ್ಪ ಇದ್ದಿದ್ದರೆ ಖಂಡಿತ ಕುಡಿಯುತ್ತಿದ್ದೆ ಅಂತ ಹೇಳಿದಾಗ ಸಭಾಪತಿ ಬಸವರಾಜ ಹೊರಟ್ಟಿ, ಶಿವಕುಮಾರ್, ಬಿಕೆ ಹರಿಪ್ರಸಾದ್ ಸೇರಿ ಸದನದಲ್ಲಿದ್ದವರೆಲ್ಲ ಜೋರಾಗಿ ನಗುತ್ತಾರೆ.
ಬೆಂಗಳೂರು: ವಿಧಾನ ಪರಿಷತ್ ನಲ್ಲಿ ನಿನ್ನೆ ಕಂಡ ಕೋಲಾಹಲ ಇವತ್ತಿಲ್ಲ, ಕಲಾಪ ಸರಾಗವಾಗಿ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Pujari) ನೀರಾದ ಬಗ್ಗೆ ಪ್ರಸ್ತಾಪವನ್ನು ಮಂಡಿಸಿ ನೀರಾ (ಸೇಂದಿ ಅಥವಾ ಹೆಂಡದ ಪ್ರಾಥಮಿಕ ಹಂತ) ಅಂಗಡಿಗಳನ್ನು ಓಪನ್ (toddy shops) ಮಾಡಲು ಯಾದಗಿರಿ ಜಿಲ್ಲೆ (Yadgir) ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನ ಒತ್ತಾಯಿಸುತ್ತಿರವುದರಿಂದ ಸರ್ಕಾರ ಸಂಬಂಧಪಟ್ಟ ಸಚಿವ ಮತ್ತು ಶಾಸಕರ ಒಂದು ಸಭೆ ಕರೆದು ನಿರ್ಣಯ ತೆಗೆದುಕೊಂಡರೆ ಆ ಭಾಗದ ಜನರಿಗೆ ಅನುಕೂಲವಾಗುತ್ತದೆ ಅನ್ನುತ್ತಾರೆ. ಅವರಿಗೆ ಉತ್ತರ ನೀಡಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎದ್ದು ನಿಂತಾಗ ಆಡಳಿತ ಪಕ್ಷದ ಸದಸ್ಯರೊಬ್ಬರು, ನೀರಾವನ್ನು ಕುಡಿದಿದ್ದೀರಾ ಅಂತ ಪೂಜಾರಿಯವರನ್ನು ಕೆಣಕುತ್ತಾರೆ. ಇಲ್ಲ, ನೀರಾ ಹೊತ್ತು ಏರುತ್ತಿದ್ದಂತೆ ಹೆಂಡವಾಗಿ ಮಾರ್ಪಡುತ್ತದೆ, ಅದನ್ನು ಕುಡಿದ ಬಳಿಕ ಏರುವ ಮತ್ತನ್ನು ತಾಳಿಕೊಳ್ಳುವ ದೇಹದಾರ್ಢ್ಯ ತನ್ನದಲ್ಲ, ಶಿವಕುಮಾರ್ ಅವರ ಹಾಗೆ ದಪ್ಪ ಇದ್ದಿದ್ದರೆ ಖಂಡಿತ ಕುಡಿಯುತ್ತಿದ್ದೆ ಅಂತ ಹೇಳಿದಾಗ ಸಭಾಪತಿ ಬಸವರಾಜ ಹೊರಟ್ಟಿ, ಶಿವಕುಮಾರ್, ಬಿಕೆ ಹರಿಪ್ರಸಾದ್ ಸೇರಿ ಸದನದಲ್ಲಿದ್ದವರೆಲ್ಲ ಜೋರಾಗಿ ನಗುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ