ಪಾಖಂಡಿಯೊಬ್ಬನನ್ನು ವಿನಾಕಾರಣ ನಂಬಿ ಬದುಕು ಹಾಳು ಮಾಡಿಕೊಂಡ ಬೆಳಗಾವಿ ಯುವತಿ

ಪಾಖಂಡಿಯೊಬ್ಬನನ್ನು ವಿನಾಕಾರಣ ನಂಬಿ ಬದುಕು ಹಾಳು ಮಾಡಿಕೊಂಡ ಬೆಳಗಾವಿ ಯುವತಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 27, 2024 | 11:58 AM

ಫೆಬ್ರುವರಿ 14ರಂದು ಆಕೆಯ ಮದುವೆ ಬೇರೊಬ್ಬ ಯುವಕನೊಂದಿಗೆ ಆದಾಗ ವರನ ಅಣ್ಣನಿಗೆ ತಾನು ಮತ್ತು ಯುವತಿ ಏಕಾಂತದಲ್ಲಿದ್ದ ವಿಡಿಯೋವನ್ನು ಕಳಿಸಿದ್ದಾನೆ. ಪರಿಣಾಮ ಗೊತ್ತಲ್ಲ? ಮದುವೆಯಾದ ಮರುದಿನವೇ ಗಂಡನ ಮನೆಯವರು ಯುವತಿಯನ್ನು ಮನೆಯಿಂದ ಹೊರದಬ್ಬಿದ್ದಾರೆ. ಹೆತ್ತವರು ಕೂಡ ಆಕೆಯನ್ನು ಮನೆಯಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಪೊಲೀಸರಿಗೆ ದೂರು ನೀಡಿದರೆ ಅವರಿಂದ ಯಾವುದೇ ಕ್ರಮವಿಲ್ಲ.

ಬೆಳಗಾವಿ: ಒಬ್ಬ ಪಾಖಂಡಿಯನ್ನು ನಂಬಿ ಕಿತ್ತೂರಿನ ಯುವತಿ (young woman) ತನ್ನ ಬದುಕನ್ನು ಹಾಳುಮಾಡಿಕೊಂಡಿದ್ದಾಳೆ. ಅದರಲ್ಲಿ ಇವಳ ತಪ್ಪು ಕೂಡ ಇದೆ, ಅದನ್ನು ಅಲ್ಲಗಳೆಯುವಂತಿಲ್ಲ. ಸೋಮವಾರಪೇಟೆಯ ಮುತ್ತುರಾಜ್ ಬಸವರಾಜ್ ಇಟಗಿ (Muthuraj Basavaraj Itagi) ಹೆಸರಿನ ಯುವಕನೊಂದಿಗೆ ಯುವತಿಗೆ ಲವ್ ಆಗಿ ದೈಹಿಕ ಸಂಪರ್ಕದವರೆಗೆ ಮುಂದುವರಿದಿದೆ. ಯುವತಿಯ ವಿರೋಧದ ಹೊರತಾಗಿಯೂ ತಮ್ಮಿಬ್ಬರ ರತಿಕ್ರೀಡೆಯ (physical intimacy) ವಿಡಿಯೋ ಮಾಡಿದ್ದಾನೆ. ಆಕೆಯ ಮದುವೆ ನಿಶ್ಚಯವಾಗುವ ಸಂದಭದಲ್ಲಿ ಅವಳ ತಂದೆ-ತಾಯಿ ಬಳಿ ಹೋಗಿ ಮದುವೆಯಾಗುತ್ತೇನೆಂದು ಹೇಳುವ ಧೈರ್ಯ ಈ ಭಂಡನಲ್ಲಿರಲಿಲ್ಲ. ಫೆಬ್ರುವರಿ 14ರಂದು ಆಕೆಯ ಮದುವೆ ಬೇರೊಬ್ಬ ಯುವಕನೊಂದಿಗೆ ಆದಾಗ ವರನ ಅಣ್ಣನಿಗೆ ತಾನು ಮತ್ತು ಯುವತಿ ಏಕಾಂತದಲ್ಲಿದ್ದ ವಿಡಿಯೋವನ್ನು ಕಳಿಸಿದ್ದಾನೆ. ಪರಿಣಾಮ ಗೊತ್ತಲ್ಲ? ಮದುವೆಯಾದ ಮರುದಿನವೇ ಗಂಡನ ಮನೆಯವರು ಯುವತಿಯನ್ನು ಮನೆಯಿಂದ ಹೊರದಬ್ಬಿದ್ದಾರೆ. ಹೆತ್ತವರು ಕೂಡ ಆಕೆಯನ್ನು ಮನೆಯಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಪೊಲೀಸರಿಗೆ ದೂರು ನೀಡಿದರೆ ಅವರಿಂದ ಯಾವುದೇ ಕ್ರಮವಿಲ್ಲ.

ಅದಕ್ಕೇ ನಾವು ಹೇಳಿದ್ದು ಯುವತಿ ಪಾಖಂಡಿಯನ್ನು ನಂಬಿ ಸರ್ವಸ್ವವನ್ನು ಹಾಳು ಮಾಡಿಕೊಂಡಿದ್ದಾಳೆ. ತಾನು ಪ್ರೀತಿಸಿದ ಯುವತಿಯ ಸಂತೋಷ, ನೆಮ್ಮದಿ ಮತ್ತು ಇಡೀ ಬದುಕನ್ನು ಹಾಳು ಮಾಡಿದವನು ಯಾವ ಅರ್ಥದಲ್ಲಿ ಗಂಡಸು ಅನಿಸಿಕೊಂಡಾನು? ತಾನು ಗಂಡಸು ಅಂತ ಸಾಬೀತು ಮಾಡಲು ಅವನಿಗೆ ಈಗಲೂ ಒಂದು ಅವಕಾಶವಿದೆ. ಅಕೆಗೆ ಡಿವೋರ್ಸ್ ಕೊಡಿಸಿ ತಾನು ಮದುವೆಯಾಗಿ ಹೊಸ ಬಾಳು ನೀಡುವ ಮೂಲಕ ಅವನು ತಾನೆಸಗಿದ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಬಹುದು.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 23, 2024 10:29 AM