ಅಪ್ಪು ಸ್ಥಾನದಲ್ಲಿ ನನ್ನ ಮಗ ಇದ್ದಿದ್ದರೂ ಅವರಿಗೆ ನೀಡಿದ ಚಿಕಿತ್ಸೆಯನ್ನೇ ಅವನಿಗೂ ನೀಡುತ್ತಿದ್ದೆ: ಡಾ ರಮಣ ರಾವ್
ಡಾ ರಾಜಕುಮಾರ ಅವರ ಆಪ್ತರೂ ಮತ್ತು ಕುಟುಂಬ ವೈದ್ಯರೂ ಅಗಿರುವ ಡಾ ರಾವ್ ಅವರು ಅಪ್ಪು ಜೊತೆ ವಿಕ್ರಮ್ ಆಸ್ಪತ್ರೆಗೆ ಯಾಕೆ ಹೋಗಲಿಲ್ಲ ಅಂತ ಎದ್ದಿರುವ ಪ್ರಶ್ನೆಗೂ ಡಾ ರಾವ್ ಸಮರ್ಪಕ ಉತ್ತರ ನೀಡಿದರು.
ಪುನೀತ್ ರಾಜಕುಮಾರ ಅವರ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಆರೋಪ ಮತ್ತು ಸಂದೇಹಗಳಿಗೆ ಡಾ ರಮಣ ರಾವ್ ಸ್ಪಷ್ಟನೆ ನೀಡಿದ್ದಾರೆ. ಅಪ್ಪು ಅವರಿಗೆ ತಮ್ಮ ಕ್ಲಿನಿಕ್ ನಲ್ಲೇ ಡಾ ರಾವ್ ಅವರು ಸಿಪಿಆರ್ (cardiopulmonary resuscitation) ಚಿಕಿತ್ಸೆ ಯಾಕೆ ನೀಡಲಿಲ್ಲ ಅಂತ ಜನರಲ್ಲಿ ಎದ್ದಿರುವ ಸಂದೇಹದ ಬಗ್ಗೆ ಟಿವಿ9 ನಿರೂಪಕ ಆನಂದ ಬುರ್ಲಿ ಕೇಳಿದಾಗ ಡಾ ರಾವ್ ಅವರು, ಸಿಪಿಅರ್ ಮಾಡುವಂಥ ಅವಶ್ಯಕತೆ ಅಪ್ಪು ಅವರಿಗಿರಲಿಲ್ಲ. ಅವರು ಫಿಟ್ ಅಂಡ್ ಫೈನ್ ಆಗಿದ್ದರು. ಹೃದಯ ಬಡಿತ ನಿಂತಾಗ ಮಾತ್ರ ಸಿಪಿಅರ್ ಮಾಡಲಾಗುತ್ತದೆಯೇ ಹೊರತು ಅದು ಸರಿಯುವವರಿಗೆ ಅದರ ಅಗತ್ಯವಿರುವುದಿಲ್ಲ ಎಂದು ಡಾ ರಾವ್ ಹೇಳಿದರು.
ಡಾ ರಾಜಕುಮಾರ ಅವರ ಆಪ್ತರೂ ಮತ್ತು ಕುಟುಂಬ ವೈದ್ಯರೂ ಅಗಿರುವ ಡಾ ರಾವ್ ಅವರು ಅಪ್ಪು ಜೊತೆ ವಿಕ್ರಮ್ ಆಸ್ಪತ್ರೆಗೆ ಯಾಕೆ ಹೋಗಲಿಲ್ಲ ಅಂತ ಎದ್ದಿರುವ ಪ್ರಶ್ನೆಗೂ ಡಾ ರಾವ್ ಸಮರ್ಪಕ ಉತ್ತರ ನೀಡಿದರು. ಪುನೀತ್ ಅವರು ಆಸ್ಪತ್ರೆಗೆ ಬಂದಾಗ ಡಾ ರಾವ್ ಎದೆನೋವಿನಿಂದ ಬಳಲುತ್ತಿದ್ದ ಒಬ್ಬ ವಯಸ್ಕರನ್ನು ಆವರು ತಪಾಸಣೆ ಮಾಡುತ್ತಿದ್ದರು. ಆದರೆ, ಅಪ್ಪುಗೋಸ್ಕರ ಆ ಹಿರಿಯರಿಗೆ ಸ್ವಲ್ಪ ಸಮಯದ ನಂತರ ನೋಡುವುದಾಗಿ ವಿನಂತಿಸಿಕೊಂಡು ನಟನಿಗೆ ಅಗತ್ಯವಿದ್ದ ಚಿಕಿತ್ಸೆ ನೀಡಿದರು.
ಅಪ್ಪು ಜೊತೆ ಆಸ್ಪತ್ರೆಗೆ ಯಾಕೆ ಹೋಗಲಿಲ್ಲ ಎಂಬ ಪ್ರಶ್ನೆಗೆ ಡಾ ರಾವ್, ಒಬ್ಬ ವೈದ್ಯನಾಗಿ ತಮಗೆ ಹಲವು ಬದ್ಧತೆಗಳಿರುತ್ತವೆ. ಎಮರ್ಜೆನ್ಸಿಯಂಥ ಸ್ಥಿತಿಯಲ್ಲಿದ್ದ ರೋಗಿಗಳನ್ನು ಬಿಟ್ಟು ಆಪ್ಪು ಜೊತೆ ಹೋಗುವಂತಿರಲಿಲ್ಲ. ಅಲ್ಲದೆ, ಇನ್ನೂ ಯುವಕ ಮತ್ತು ಫಿಟ್ ಆಗಿದ್ದ ಅಪ್ಪು ಅವರಲ್ಲಿ ದೊಡ್ಡ ಸಮಸ್ಯೆಯೇನೂ ಕಂಡಿರಲಿಲ್ಲ. ಹಾಗಾಗಿ ತಾವು ಅಪ್ಪು ಜೊತೆ ಹೋಗಲಿಲ್ಲ ಎಂದು ಡಾ ರಾವ್ ಹೇಳಿದರು.
ಪುನೀತ್ ಅವರನ್ನು ಅವರ ಕಾರಲ್ಲೇ ಕಳಿಸಿದ್ದ್ಯಾಕೆ, ಅಂಬ್ಯುಲೆನ್ಸ್ನಲ್ಲಿ ಯಾಕೆ ಕಳಿಸಲಿಲ್ಲ ಅಂತ ಕೇಳಿದಾಗ ಡಾ ರಾವ್ ಅವರು, ಪುನೀತ್ ಅವರು ಬೇಗ ಅಸ್ಪತ್ರೆಗೆ ಸೇರುವುದು ಅವಶ್ಯಕವಾಗಿತ್ತು. ಆಂಬ್ಯುಲೆನ್ಸ್ ಗೆ ಫೋನ್ ಮಾಡಿದ್ದರೆ ಅವರು ಆಸ್ಪತ್ರೆ ತಲುಪಲು ಕನಿಷ್ಟ ಅರ್ಧಗಂಟೆ ಬೇಕಾಗುತಿತ್ತು. ಹಾಗಾಗೇ ಅವರನ್ನು ಕಾರಲ್ಲಿ ಕಳಿಸಿದೆ ಎಂದು ಡಾ ರಾವ್ ಹೇಳಿದರು. ಒಂದು ಪಕ್ಷ ತಮ್ಮ ಮಗ ಅಂಥ ಪರಿಸ್ಥಿತಿಯಲ್ಲಿದಿದ್ದರೆ ಏನು ಮಾಡುತ್ತಿದ್ದರೋ ಅದೆಲ್ಲವನ್ನು ಪುನೀತ್ಗೆ ಮಾಡದ್ದಾಗಿ ಅವರು ಹೇಳಿದರು.
ಇದನ್ನೂ ಓದಿ: ಪುನೀತ್ ನಿವಾಸಕ್ಕೆ ಬಂದು ಸಾಂತ್ವನ ಹೇಳಿದ ಜಯಪ್ರದಾ; ಅಪ್ಪು ನೆನೆದು ಕಣ್ಣೀರಿಟ್ಟ ಹಿರಿಯ ನಟಿ