Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿರದಿದ್ದರೆ ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಮತ್ತಷ್ಟು ಶೋಚನೀಯವಾಗಿರುತಿತ್ತು: ಬಸನಗೌಡ ಯತ್ನಾಳ್

ಪ್ರಧಾನಿ ಮೋದಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿರದಿದ್ದರೆ ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಮತ್ತಷ್ಟು ಶೋಚನೀಯವಾಗಿರುತಿತ್ತು: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 14, 2023 | 1:24 PM

Basanagouda Patil Yatnal: ಪಕ್ಷ 66 ಸೀಟು ಗೆಲ್ಲಲು ಸಾಧ್ಯವಾಗಿದ್ದಕ್ಕೆ ಯತ್ಮಾಳ್ ಅವರು ತಮಗೂ ಕ್ರೆಡಿಟ್ ಸಿಗಬೇಕು ಅನ್ನುವ ರೀತಿಯಲ್ಲಿ ಮಾತಾಡಿದ್ದು ಭಾಸವಾಗುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕ್ಷೇತ್ರಗಳ ಪ್ರವಾಸ ಮಾಡಿ 44 ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತಾಡಿದ್ದಾಗಿ ಅವರು ಹೇಳಿದರು.

ವಿಜಯಪುರ: 16 ನೇ ವಿಧಾನಸಭೆಯ ಮೊದಲ ಅಧಿವೇಶನದ (Assembly session) ಕೊನೆಹಂತದಲ್ಲಿ ಬಿಜೆಪಿಯ 10 ಶಾಸಕರು ಸಸ್ಪೆಂಡ್ ಆದಾಗ ಉಗ್ರ ಪ್ರತಿಭಟನೆ ನಡೆಸಿ, ವಿಧಾನ ಸಭೆಯ ಮಾರ್ಷಲ್ ಗಳ ತಳ್ಳಾಟ-ನೂಕಾಟದಲ್ಲಿ ಬಿಪಿ ಹೆಚ್ಚಿಸಿಕೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದ ಬಳಿಕ ಮೊದಲ ಬಾರಿಗೆ ಸರ್ವಜನಿಕವಾಗಿ ಕಾಣಿಸಿಕೊಂಡ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಎಂದಿನಂತೆ ಕಾಂಗ್ರೆಸ್ ಸರ್ಕಾರ ಮತ್ತು ಅದರ ನಾಯಕರನ್ನು ಟೀಕಿಸಿದರಾದರೂ, ತಮ್ಮ ಪಕ್ಷದ ದಯನೀಯ ಸ್ಥಿತಿಯ ಬಗ್ಗೆಯೂ ಹೇಳಿಕೊಂಡರು. ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿರದಿದ್ದರೆ, ಪಕ್ಷದ ಸ್ಥಿತಿ ಇನ್ನೂ ಚಿಂತಾಜನಕವಾಗಿರುತಿತ್ತು ಎಂದು ಯತ್ನಾಳ್ ಹೇಳಿದರು. ಪಕ್ಷ 66 ಸೀಟು ಗೆಲ್ಲಲು ಸಾಧ್ಯವಾಗಿದ್ದಕ್ಕೆ ಯತ್ಮಾಳ್ ಅವರು ತಮಗೂ ಕ್ರೆಡಿಟ್ ಸಿಗಬೇಕು ಅನ್ನುವ ರೀತಿಯಲ್ಲಿ ಮಾತಾಡಿದ್ದು ಭಾಸವಾಗುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕ್ಷೇತ್ರಗಳ ಪ್ರವಾಸ ಮಾಡಿ 44 ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತಾಡಿದ್ದಾಗಿ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ