ಪ್ರಾಣಿಯ ವಧೆ ಹೇಗಾದರೂ ಆಗಿರಲಿ, ನಾನಂತೂ ಮಾಂಸ ತಿನ್ನುತ್ತೇನೆ ಅಂದರು ಸಚಿವ ಈಶ್ವರಪ್ಪ!

ಪ್ರಾಣಿಯ ವಧೆ ಹೇಗಾದರೂ ಆಗಿರಲಿ, ನಾನಂತೂ ಮಾಂಸ ತಿನ್ನುತ್ತೇನೆ ಅಂದರು ಸಚಿವ ಈಶ್ವರಪ್ಪ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 31, 2022 | 7:51 PM

ಮುಸಲ್ಮಾನರು ತಮ್ಮ ನಂಬಿಕೆಯನ್ನು ಅನುಸರಿಸಲಿ ಮತ್ತು ಹಿಂದೂಗಳು ತಮಗೆ ಸರಿ ಅನಿಸುವುದನ್ನು. ಅಷ್ಟಾಗಿಯೂ ಸಚಿವರು, ಹಲಾಲ್ ಕಟ್ ಆಗಿರುವ ಮಾಂಸ ಖರೀದಿಬಾರದು ಅಂತ ಹೇಳಿದರೆ ಅದರಲ್ಲಿ ತಪ್ಪೇನಿದೆ ಎಂದು ಹೇಳುತ್ತಾರೆ.

ಬೆಂಗಳೂರು: ಹಲಾಲ್ ಕಟ್ ಮಾಂಸ ತಿನ್ನಬೇಕೇ, ತಿನ್ನಬಾರದೇ ಅನ್ನುವ ಬಗ್ಗೆ ಬಿಜೆಪಿ ನಾಯಕರಲ್ಲಿ ಭಯಂಕರ ಗೊಂದಲವಿದೆ ಮಾರಾಯ್ರೇ. ಹಲಾಲ್ ಕಟ್ ಆಗಿರುವ ಪ್ರಾಣಿಯ ಮಾಂಸ (meat) ಯಾಕೆ ತಿನ್ನಬಾರದು ಅನ್ನುವ ಬಗ್ಗೆ ಅವರಲ್ಲಿ ಸ್ಪಷ್ಟತೆ (clarity) ಇಲ್ಲ. ಬೆಂಗಳೂರಲ್ಲಿ ಗುರುವಾರ ನಡೆದ ಒಂದು ಪತ್ರಿಕಾ ಗೋಷ್ಟಿಯಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi) ಅವರು ಮಾಧ್ಯಮದವರು ಹಲಾಲ್ ಕಟ್ ಮಾಂಸದ ಬಗ್ಗೆ ಪ್ರಶ್ನೆ ಕೇಳುವಾಗ ಉತ್ತರಿಸಲು ತಡವರಿಸುತ್ತಾರೆ, ಅಸಲಿಗೆ ಅವರಿಗೆ ಏನು ಹೇಳಬೇಕು ಅಂತಲೂ ಗೊತ್ತಾಗುವುದಿಲ್ಲ. ಇಲ್ಲಿ ಮತ್ತೊಂದು ಸುದ್ದಿಗೋಷ್ಟಿಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಅವರ ಸ್ಥಿತಿಯೂ ಹೆಚ್ಚು ಕಡಿಮೆ ರವಿಯವರ ಹಾಗೆಯೇ ಇದೆ. ಆದರೆ, ಮಾಂಸ ಹಲಾಲ್ ಕಟ್ ಆಗಿರಲಿ ಆಥವಾ ಜಟ್ಕಾ ಕಟ್; ತಾವಂತೂ ಅದನ್ನು ತಿನ್ನುವುದು ಸತ್ಯ ಅಂತ ಹೇಳುತ್ತಾರೆ. ಆದರರ್ಥ ಹಲಾಲ್ ಕಟ್ ಆಗಿರುವ ಪ್ರಾಣಿಯ ಮಾಂಸ ತಿನ್ನಲು ಅವರಿಗೆ ಅಭ್ಯಂತರವಿಲ್ಲ.

ಎಂಥ ಕಟ್ ಆಗಿರುವ ಮಾಂಸ ತಿನ್ನಬೇಕು ಅನ್ನೋದು ಅವರವರ ನಂಬಿಕೆ ಬಿಟ್ಟಿದ್ದು ಎಂದು ಹೇಳುವ ಈಶ್ವರಪ್ಪನವರು ಹಲಾಲ್ ಮತ್ತು ಜಟ್ಕಾ ಕಟ್ ಗಳ ಬಗ್ಗೆ ವ್ಯಾಖ್ಯಾನ ನೀಡುತ್ತಾರೆ. ಮುಸಲ್ಮಾನರು ಪ್ರಾಣಿವಧೆ ಮಾಡುವಾಗ ಅದರ ಮುಖವನ್ನು ಮೆಕ್ಕಾ ಇರುವ ದಿಕ್ಕನೆಡೆ ತಿರುಗಿಸಿ ಕುತ್ತಿಗೆ ಭಾಗದಲ್ಲಿರುವ ಮುಖ್ಯ ರಕ್ತನಾಳವನ್ನು ಕಟ್ ಮಾಡಿದರೆ ಅದರ ಆತ್ಮ ಮೇಲೆ ತಲುಪುತ್ತದೆ ಅನ್ನೋದು ಅವರ ನಂಬಿಕೆ. ಹಾಗೆಯೇ, ಪ್ರಾಣಿಯ ನರ ಮಾತ್ರ ಕಟ್ ಮಾಡಿ ಅದು ಒದ್ದಾಡುತ್ತಾ ಸಾಯುವ ಬದಲು ಒಂದೇ ಏಟಿಗೆ ಕುತ್ತಿಗೆಯನ್ನು ತುಂಡರಿಸಿದರೆ ಅದು ಸಾಯುವ ಮುಂಚಿನ ಒದ್ದಾಟ ತಪ್ಪಿಸಿದಂತಾಗುತ್ತದೆ, ಅನ್ನೋದು ಹಿಂದೂಗಳ ನಂಬಿಕೆ ಅಂತ ಈಶ್ವರಪ್ಪ ಹೇಳಿದರು.

ಮುಸಲ್ಮಾನರು ತಮ್ಮ ನಂಬಿಕೆಯನ್ನು ಅನುಸರಿಸಲಿ ಮತ್ತು ಹಿಂದೂಗಳು ತಮಗೆ ಸರಿ ಅನಿಸುವುದನ್ನು. ಅಷ್ಟಾಗಿಯೂ ಸಚಿವರು, ಹಲಾಲ್ ಕಟ್ ಆಗಿರುವ ಮಾಂಸ ಖರೀದಿಬಾರದು ಅಂತ ಹೇಳಿದರೆ ಅದರಲ್ಲಿ ತಪ್ಪೇನಿದೆ ಎಂದು ಹೇಳುತ್ತಾರೆ. ಮುಸಲ್ಮಾನರ ಒಡೆತನದ ಮಾಂಸದ ಅಂಗಡಿಗಳೇ ಜಾಸ್ತಿ ಇವೆ ಎಂಬ ವಾದವನ್ನು ಅವರು ಒಪ್ಪುವುದಿಲ್ಲ.

ಹಿಂದೂಗಳು ಹೆಚ್ಚಿರುವ ಪ್ರದೇಶಗಳಲ್ಲಿ ಹಿಂದೂಗಳ ಒಡೆತನದ ಮಾಂಸದಂಗಡಿಗಳಿವೆ ಮತ್ತು ಅಂತೆಯೇ ಮುಸಲ್ಮಾನರ ಜನಸಂಖ್ಯೆ ಜಾಸ್ತಿಯಿರುವ ಪ್ರದೇಶಗಳಲ್ಲಿ ಅವರ ಅಂಗಡಿಗಳಿವೆ ಎಂದು ಈಶ್ವರಪ್ಪ ಹೇಳುತ್ತಾರೆ.

ಇದನ್ನೂ ಓದಿ:   Pak Vs Aus: ಮಿಸ್​ಫೀಲ್ಡಿಂಗ್​ ಮಾಡಿದ ಪಾಕ್ ಆಟಗಾರ; ಆದರೂ ರನ್​ ಔಟ್ ಆದ ಆಸ್ಟ್ರೇಲಿಯಾ ಬ್ಯಾಟರ್- ಹೇಗೆ? ವಿಡಿಯೋ ಇಲ್ಲಿದೆ