ಇನ್ನು ನನ್ನ ನಡೆ ಏನಿದ್ದರೂ ಹಿರಿಯರಾದ ಹೆಚ್ ಡಿ ದೇವೇಗೌಡ ಮಾರ್ಗದರ್ಶನದ ಮೇರೆಗೆ: ಸಿ ಎಮ್ ಇಬ್ರಾಹಿಂ
ನಾನು ಯಾರನ್ನೂ ಟೀಕಿಸುವುದಿಲ್ಲ, ಬಯ್ಯುವುದಿಲ್ಲ ಎಂದ ಅವರು ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ನಿಮ್ಮ ನಿಮ್ಮ ತನವ ಸಂತೈಸಿಕೊಳ್ಳಿ ಅಂತ ವಚನ ಹೇಳುತ್ತಾರೆ. ಜೆಡಿಎಸ್ ಪಕ್ಷದಲ್ಲಿರುವ ತೊಡಕುಗಳನ್ನು ಸರಿಪಡಿಸಿಕೊಂಡು ನಾವು ಮುಂದೆ ಸಾಗಬೇಕಿದೆ ಎಂದು ಇಬ್ರಾಹಿಂ ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಜೆಡಿ(ಎಸ್) ಪಕ್ಷ ಸೇರಿರುವ ಸಿ ಎಮ್ ಇಬ್ರಾಹಿಂ (CM Ibrahim) ಅವರು ಗುರುವಾರ ಬಹಳ ನಿರಾಳ ಮನೋಭಾವದೊಂದಿಗೆ ಮಾಧ್ಯಮಗಳ ಜೊತೆ ಮಾತಾಡಿದರು. ತಮ್ಮ ಮಾತಿನಲ್ಲಿ ಅವರು ಸಂದರ್ಭಕ್ಕನುಗುಣವಾಗಿ ಬಸವಣ್ಣನವರು (Basavanna) ವಚನಗಳನ್ನು ಧಾರಾಳವಾಗಿ ಬಳಸುತ್ತಾರೆ. ಗುರುವಾರ ಮುಸ್ಲಿಂ, ವೈಷ್ಣವ ಮತ್ತು ಶೈವ ಸಮುದಾಯಗಳಿಗೆ ಶ್ರೇಷ್ಠವಾದ ದಿನ, ನಿಮ್ಮೆಲ್ಲರಿಗೆ ಶುಭವಾಗಲಿ ಅಂತ ಮಾತು ಆರಂಭಿಸುವ ಇಬ್ರಾಹಿಂ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ಸಭಾಪತಿಗಳಾದ ಬಸವರಾಜ ಹೊರಟ್ಟಿ (Basavaraj Horatti) ಅವರು ಅಂಗೀಕಾರವಾಗಿದೆ ಎಂದು ಹೇಳಿರುವುದರಿಂದ ಹೊರೆ ಕಳಚಿದಂತಾಗಿದೆ ಎಂದು ಹೇಳಿದರು.
ಇನ್ನು ತಮ್ಮ ಮುಂದಿನ ನಡೆ ಹೆಚ್ ಡಿ ದೇವೇಗೌಡರ ಮಾರ್ಗದರ್ಶನಕ್ಕೆ ಬಿಟ್ಟಿದ್ದು ಎಂದ ಅವರು ಗೌಡರು, ಮಹಾತ್ಮಾ ಗಾಂಧಿ, ಜಯಪ್ರಕಾಶ ನಾರಾಯಣ, ಮೊರಾರ್ಜಿ ದೇಸಾಯಿ ಮತ್ತು ಸರ್ದಾರ ವಲ್ಲಭ್ ಭಾಯಿ ಪಟೇಲ್ ಅವರ ಹಾಗೆ ವಯೋವೃದ್ಧ ರಾಜಕಾರಣಿ, ಮತ್ತು ನಿಷ್ಕಳಂಕಿತ, ಅಜಾತಶತ್ರು ಹಾಗೂ ರಾಜ್ಯಕ್ಕೆ ಹೆಸರು ತಂದುಕೊಟ್ಟ ನಾಯಕ ಎಂದರು.
ದೇವೇಗೌಡರ ಜೊತೆ ಸಾಗುವುದೇ ನಮ್ಮ ಮುಂದಿನ ನಡೆ, ಅನೇಕರು ಬರುತ್ತೇನೆ ಅಂತ ಹೇಳಿದ್ದಾರೆ, ಯುಗಾದಿ ಹಬ್ಬದ ಹೊಸತೊಡಕಿನ ಬಳಿಕ ಒಂದು ಪ್ರವಾಹ ಉಂಟಾಗಲಿದೆ. ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಲಿದೆ. ಮೊದಲ ಸ್ಥಾನ ಜೆಡಿಎಸ್ ಆಮೇಲೆ ಬಿಜೆಪಿ ಮತ್ತು ಕೊನೆಗೆ ಕಾಂಗ್ರೆಸ್. ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಕಾಂಗ್ರೆಸ್ ಧೂಳೀಪಟವಾದಂತೆ ಇಲ್ಲೂ ಅಗಲಿದೆ ಎಂದು ಇಬ್ರಾಹಿಂ ಹೇಳಿದರು.
ನಾನು ಯಾರನ್ನೂ ಟೀಕಿಸುವುದಿಲ್ಲ, ಬಯ್ಯುವುದಿಲ್ಲ ಎಂದ ಅವರು ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ನಿಮ್ಮ ನಿಮ್ಮ ತನವ ಸಂತೈಸಿಕೊಳ್ಳಿ ಅಂತ ವಚನ ಹೇಳುತ್ತಾರೆ. ಜೆಡಿಎಸ್ ಪಕ್ಷದಲ್ಲಿರುವ ತೊಡಕುಗಳನ್ನು ಸರಿಪಡಿಸಿಕೊಂಡು ನಾವು ಮುಂದೆ ಸಾಗಬೇಕಿದೆ ಎಂದು ಇಬ್ರಾಹಿಂ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಕೆಲ ಒಳ್ಳೆ ಸ್ನೇಹಿತರಿದ್ದರು, ಆದರೆ ಏನು ಮಾಡೋದು ಮುಂದೆ ಸಾಗಬೇಕಿದೆ. ಎನ್ನ ವಾಮಕ್ಷೇಮ ನಿಮ್ಮದಯ್ಯ, ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ, ಎನ್ನ ಮಾನಾಪಮಾನವೂ ನಿಮ್ಮದಯ್ಯ, ಬಳ್ಳಿಗೆ ಕಾಯಿ ದಿಮ್ಮಿತ್ತೆ ಕೂಡಲಸಂಗಮದೇವಾ ಎನ್ನುತ್ತಾ ಬಸವಣ್ಣನವರ ವಚನದೊಂದಿಗೆ ಅವರು ಮಾತು ಮುಗಿಸುತ್ತಾರೆ.
ಇದನ್ನೂ ಓದಿ: ಪತ್ರಕರ್ತರೊಬ್ಬರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಯೋಗ ಗುರು ರಾಮ್ದೇವ ಬಾಬಾ; ಅಷ್ಟಕ್ಕೂ ಆಗಿದ್ದೇನು..! ಇಲ್ಲಿದೆ ವೈರಲ್ ವಿಡಿಯೋ