ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on: Oct 18, 2024 | 9:00 PM

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್​ನನ್ನು ಇಸ್ರೇಲಿ ಮಿಲಿಟರಿ ಪಡೆ ಹೊಡೆದುರುಳಿಸಿದೆ. ಯಾಹ್ಯಾ ಸಿನ್ವಾರ್ ಅಡಗಿದ್ದ ಸ್ಥಳದ ಮೇಲೆ ದಾಳಿ ಮಾಡಿದ ಇಸ್ರೇಲ್ ಪಡೆ ಆತನ ಚಲನವಲನಗಳನ್ನು ಗಮನಿಸಲು ಡ್ರೋನ್ ಕ್ಯಾಮೆರಾ ಬಳಸಿತ್ತು. ಆ ಡ್ರೋನ್ ಕ್ಯಾಮೆರಾದಲ್ಲಿ ಯಾಹ್ಯಾ ಸಿನ್ವಾರ್​ನ ಅಂತಿಮ ಕ್ಷಣಗಳು ಸೆರೆಯಾಗಿವೆ. ಆ ವಿಡಿಯೋವನ್ನು ಇಸ್ರೇಲ್ ಬಿಡುಗಡೆ ಮಾಡಿದೆ.

ಗಾಜಾ: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್​​ ಹತ್ಯೆಯಾಗಿದೆ. ಸಿನ್ವಾರ್ ಇಸ್ರೇಲಿ ಪಡೆಗಳ ವಿರುದ್ಧ ಹೋರಾಡುವ ಕೊನೆಯ ವೀಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಖುದ್ದು ಇಸ್ರೇಲ್ ಬಿಡುಗಡೆ ಮಾಡಿದೆ. ಇಸ್ರೇಲ್ ಮಿಲಿಟರಿ ಪಡೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ವಿಡಿಯೋ ಇದಾಗಿದೆ. ಕುರ್ಚಿಯ ಮೇಲೆ ಕುಳಿತಿರುವ ಯಾಹ್ಯಾ ಸಿನ್ವಾರ್​ ಡ್ರೋನ್ ಕ್ಯಾಮೆರಾಗೆ ಕೋಲನ್ನು ಎಸೆದು ಪುಡಿ ಮಾಡಲು ಪ್ರಯತ್ನಿಸಿರುವುದನ್ನು ನೋಡಬಹುದು. ಆದರೆ, ಇದಾದ ಕೆಲವೇ ಸೆಕೆಂಡುಗಳಲ್ಲಿ ಇಸ್ರೇಲ್ ಪಡೆ ಆತನನ್ನು ಹತ್ಯೆ ಮಾಡಿದೆ. ಆತ ಎಲ್ಲಿದ್ದಾನೆಂದು ಡ್ರೋನ್ ಕ್ಯಾಮರಾ ಮೂಲಕ ಕಂಡ ಇಸ್ರೇಲ್ ಪಡೆ IDF ಶೆಲ್ ಅನ್ನು ಹಾರಿಸಿತು. ಅದು ಯಾಹ್ಯಾ ಸಿನ್ವಾರ್​ನನ್ನು ಕೊಂದಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ