ಉತ್ತರ ಕನ್ನಡ ಜಿಲ್ಲೆಯಲ್ಲಿರುವ ತೂಗು ಸೇತುವೆಗಳು ಸಹ ಶಿಥಿಲಾವಸ್ಥೆಯಲ್ಲಿವೆ!

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ತೂಗು ಸೇತುವೆಗಳು ಸಹ ಶಿಥಿಲಾವಸ್ಥೆಯಲ್ಲಿವೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 02, 2022 | 12:44 PM

ಎಲ್ಲ ಸೇತುವೆಗಳ ಪಕ್ಕಾ ದುರಸ್ತಿ ಕೂಡಲೇ ಆಗಲಿಲ್ಲ ಅಂತಾದ್ರೆ ತೂಗು ಸೇತುವೆಗಳ ಮೇಲೆಯೇ ಅಪಾಯದ ತೂಗುಕತ್ತಿ ನೇತಾಡುತ್ತಿರುವುದರಿಂದ ದುರಂತ ಸಂಭವಿಸುವ ಸಾಧ್ಯತೆ ಜಾಸ್ತಿಯೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಾರವಾರ:  ಗುಜರಾತಿನ ಮೊರ್ಬಿ ನದಿಗೆ (Morbi River ) ಅಡ್ಡಲಾಗಿ ನಿರ್ಮಿಸಿದ್ದ ತೂಗು ಸೇತುವೆ (hanging bridge) ಕುಸಿದ್ದುಬಿದ್ದು ಸುಮಾರು 150 ಜನರನ್ನು ಬಲಿಪಡೆದಿದ್ದು ದೊಡ್ಡ ದುರಂತ. ನಮ್ಮ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಹಲವು ತೂಗು ಸೇತುವೆಗಳನ್ನು ನಿರ್ಮಿಸಲಾಗಿದ್ದು ಅವೆಲ್ಲ ಶಿಥಿಲಾವಸ್ಥೆಯಲ್ಲಿವೆ ಎಂದು ಅವಗಳನ್ನು ಸಂಪರ್ಕಕೊಂಡಿಗಳಾಗಿ ಬಳಸುವ ಜನ ಹೇಳುತ್ತಿದ್ದಾರೆ. ಅವುಗಳ ನಿರ್ಮಾಣಕ್ಕೆ ಬಳಸಿರುವ ಕಬ್ಬಿಣದ ಕಂಬಿಗಳು ತುಕ್ಕು ಹಿಡಿದಿದ್ದರೆ, ಕಟ್ಟಿಗೆ ಹಲಗೆಗಳು ಕೊಳೆತು ಹಾಳಾಗುತ್ತಿವೆ. ಈ ಎಲ್ಲ ಸೇತುವೆಗಳ ಪಕ್ಕಾ ದುರಸ್ತಿ ಕೂಡಲೇ ಆಗಲಿಲ್ಲ ಅಂತಾದ್ರೆ ತೂಗು ಸೇತುವೆಗಳ ಮೇಲೆಯೇ ಅಪಾಯದ ತೂಗುಕತ್ತಿ ನೇತಾಡುತ್ತಿರುವುದರಿಂದ ದುರಂತ ಸಂಭವಿಸುವ ಸಾಧ್ಯತೆ ಜಾಸ್ತಿಯೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.