ಯಾಂತ್ರೀಕರಣವಾದ ಕೃಷಿಯಲ್ಲಿ ದೇಶೀ ಪದ್ದತಿ: ಹಂತಿ ಮೂಲಕ ಜೋಳದ ರಾಶಿ ಮಾಡಿದ ರೈತರು
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ಹಂತಿ ರಾಶಿ ಮಾಡಲಾಗಿದೆ. ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷರಾದ ದೇವೇಂದ್ರ ಗೋನಾಳ ಜಮೀನಿನಲ್ಲಿ ಹಂತಿ ರಾಶಿ ಮಾಡಲಾಯಿತು.
ಬೆಳ್ಳನ ಎರಡೆತ್ತು ಬೆಳ್ಳಿಯ ಬಾರಕೋಲು
ಬಂಗಾರದ ಕಡ್ಡಿ ಬಲಗೈಯಾಗ ಹಿಡಕೊಂಡು
ಹೊನ್ನ ಬಿತ್ತೆನೇ ಹೊಳಿ ಸಾಲ…. ಎಂಬ ಜಾನಪದ ಸೊಗಡಿನ ಹಂತಿ ಪದಗಳನ್ನು ಹಾಡುತ್ತಾ ರಾಶಿ ಮಾಡಲಾಗುತ್ತಿತ್ತು. ಹಂತಿ ರಾಶಿ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರಸಿದ್ಧಿ. ಮತ್ತು ಹಂತಿ ಪ್ರತಿಷ್ಠೆ ಕೂಡ ಆಗಿತ್ತು. ಆದರೆ ಯಾಂತ್ರಿಕ ಯುಗದಲ್ಲಿ ಎಲ್ಲ ಕೆಲಸಗಳು ತರಾತುರಿಯಲ್ಲಿ ಆಗಬೇಕು. ಹೀಗಾಗಿ ಎತ್ತುಗಳನ್ನು ಹೂಡಿ ಹಂತಿ ರಾಶಿ ಮಾಡುವುದನ್ನು ಬಿಟ್ಟು, ನಮ್ಮ ರೈತರು ಯಂತ್ರಗಳ ಮೊರೆ ಹೋಗಿ ರಾಶಿ ಕೆಲವೇ ಕ್ಷಣಗಳಲ್ಲಿ ಮುಗಿದು ಬಿಡುತ್ತದೆ. ಈಗಿನ ದಿನಗಳಲ್ಲಿ ಹಂತಿ ರಾಶಿ ವಿರಳಾತಿ ವಿರಳ. ಆದರೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ಹಂತಿ ರಾಶಿ ಮಾಡಲಾಗಿದೆ. ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷರಾದ ದೇವೇಂದ್ರ ಗೋನಾಳ ಜಮೀನಿನಲ್ಲಿ ಹಂತಿ ರಾಶಿ ಮಾಡಲಾಯಿತು. ರಾಶಿ ಮಾಡುವ ಮುನ್ನ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮಾಡಲಾಯಿತು.
Latest Videos