Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Session; ದೇವದಾಸಿ ಪದ್ಧತಿ ಈಗಲೂ ಜಾರಿಯಲ್ಲಿದೆ, ಗೃಹ ಸಚಿವರು ಕ್ರಮ ತೆಗೆದುಕೊಳ್ಳಬೇಕು: ಲತಾ ಮಲ್ಲಿಕಾರ್ಜುನ, ಹರಪನಹಳ್ಳಿ ಶಾಸಕಿ

Assembly Session; ದೇವದಾಸಿ ಪದ್ಧತಿ ಈಗಲೂ ಜಾರಿಯಲ್ಲಿದೆ, ಗೃಹ ಸಚಿವರು ಕ್ರಮ ತೆಗೆದುಕೊಳ್ಳಬೇಕು: ಲತಾ ಮಲ್ಲಿಕಾರ್ಜುನ, ಹರಪನಹಳ್ಳಿ ಶಾಸಕಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 13, 2023 | 2:44 PM

ಹರಪನಹಳ್ಳಿ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಧಂದೆಯ ಬಗ್ಗೆಯೂ ಲತಾ, ಗೃಹ ಸಚಿವರ ಗಮನ ಸೆಳೆದರು.

ಬೆಂಗಳೂರು: ವಿಧಾನ ಸಭಾ ಅಧಿವೇಶನದಲ್ಲಿ ಮಾತಾಡಿದ ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ (Lata Mallikarjuna) ಅವರು ಸಿದ್ದರಾಮಯ್ಯ ಸರ್ಕಾರ (Siddaramaiah Government) ಘೋಷಿಸಿರುವ ಮತ್ತು ಒಂದೆರಡನ್ನು ಜಾರಿಗೆ ತಂದಿರುವ ಗ್ಯಾರಂಟಿಗಳನ್ನು ಸ್ವಾಗತಿಸಿದರು. ಲತಾ ನಿರರ್ಗಳವಾಗಿ ಮಾತಾಡಲಿಲ್ಲವಾದರೂ ತಮ್ಮ ಭಾಗದ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದರು. ತಾವೊಂದು ಹಿಂದುಳಿದ ಕ್ಷೇತ್ರದ ಪ್ರತಿನಿಧಿಯಾಗಿರುವುದಾಗಿ ಹೇಳಿದ ಲತಾ, ಸರ್ಕಾರದ ಗ್ಯಾರಂಟಿಗಳು ಆ ಭಾಗದ ಮಹಿಳೆಯರಿಗೆ ಬಹಳ ನೆರವಾಗಲಿವೆ ಎಂದರು. ಹರಪನಹಳ್ಳಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗಲೂ ದೇವದಾಸಿ ಪದ್ಧತಿ (Devadasi System) ಜಾರಿಯಲ್ಲಿದೆ ಅದನ್ನು ತಡೆಯಲು ಗೃಹ ಸಚಿವ ಜಿ ಪರಮೇಶ್ವರ (G Parameshwara) ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು. ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಧಂದೆಯ ಬಗ್ಗೆಯೂ ಲತಾ, ಗೃಹ ಸಚಿವರ ಗಮನ ಸೆಳೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ