ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
Hardik Pandya: ಟಿ20 ವಿಶ್ವಕಪ್ ಆಡುತ್ತಿರುವ ಹಾರ್ದಿಕ್ ಪಾಂಡ್ಯ ತಮ್ಮ ವಿಚ್ಛೇದಿತ ಮಡದಿ ನತಾಶಾ ಸ್ಟಾಂಕೋವಿಕ್ ಹಾಗೂ ಮಗ ಅಗಸ್ತ್ಯಗೆ ₹4 ಕೋಟಿ ಮೌಲ್ಯದ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. 2024 ರಲ್ಲಿ ವಿಚ್ಛೇದನ ಘೋಷಿಸಿದ್ದ ಈ ಜೋಡಿ, ಪ್ರಸ್ತುತ ಹಾರ್ದಿಕ್ ಮಹಿಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ನತಾಶಾ ಮತ್ತು ಅಗಸ್ತ್ಯ ಕಾರಿನೊಂದಿಗೆ ಪೋಸ್ ನೀಡಿದ ಫೋಟೋಗಳು ವೈರಲ್ ಆಗಿವೆ.
ಪ್ರಸ್ತುತ ಟಿ20 ವಿಶ್ವಕಪ್ನಲ್ಲಿ ನಿರತರಾಗಿರುವ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ವಿಚ್ಛೇದಿತ ಮಡದಿ ನತಾಶಾ ಸ್ಟಾಂಕೋವಿಕ್ ಹಾಗೂ ಮಗ ಅಗಸ್ತ್ಯಗೆ ದುಬಾರಿ ಬೆಲೆಯ ಐಷರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ವಾಸ್ತವವಾಗಿ ಹಾರ್ದಿಕ್ ಹಾಗೂ ನತಾಶಾ 2024 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ವಿಚ್ಛೇದನವನ್ನು ಘೋಷಿಸಿದ್ದರು. ವಿಚ್ಛೇದನದ ನಂತರ ಪಾಂಡ್ಯ, ಮಹಿಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
ಏತನ್ಮಧ್ಯೆ ಹಾರ್ದಿಕ್ 3 ರಿಂದ 4 ಕೋಟಿ ರೂ. ಮೌಲ್ಯದ ಐಷಾರಾಮಿ SUV ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನತಾಶಾ ಮತ್ತು ಅಗಸ್ತ್ಯ ಕಾರಿನೊಂದಿಗೆ ಪೋಸ್ ನೀಡಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಾರ್ದಿಕ್ ಪಾಂಡ್ಯ ಈ ಉಡುಗೊರೆಯನ್ನು ತಮ್ಮ ಮಗ ಅಗಸ್ತ್ಯನಿಗೆ ನೀಡಿದ್ದಾರೆಯಾದರೂ ಅಗಸ್ತ್ಯನನ್ನು ನೋಡಿಕೊಳ್ಳುವ ಅವರ ಮಾಜಿ ಪತ್ನಿ ನತಾಶಾ ಕೂಡ ಕಾರನ್ನು ಸ್ವೀಕರಿಸಲು ಅವರೊಂದಿಗೆ ಬಂದಿದ್ದರು.