AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚು ಮಾತನಾಡಬೇಡಿ, ಸುಮ್ಮನೆ ನಿಮ್ಮ ಕೆಲಸ ಮಾಡಿ: ಪಂಚಮಸಾಲಿ ಪೀಠದ ಲೆಕ್ಕ ಕೊಡುವ ವೇಳೆ ಉಮಾಪತಿಗೆ ಸೋಮಣ್ಣ ಕರೆ

ಹೆಚ್ಚು ಮಾತನಾಡಬೇಡಿ, ಸುಮ್ಮನೆ ನಿಮ್ಮ ಕೆಲಸ ಮಾಡಿ: ಪಂಚಮಸಾಲಿ ಪೀಠದ ಲೆಕ್ಕ ಕೊಡುವ ವೇಳೆ ಉಮಾಪತಿಗೆ ಸೋಮಣ್ಣ ಕರೆ

ಅಕ್ಷಯ್​ ಪಲ್ಲಮಜಲು​​
|

Updated on: Apr 27, 2026 | 6:53 PM

Share

ಹರಿಹರ ಪಂಚಮಸಾಲಿ ಪೀಠದ ಅಭಿವೃದ್ಧಿ ನಿಧಿಯ ಗೊಂದಲಗಳ ನಡುವೆ, ಟ್ರಸ್ಟ್ ಪ್ರಮುಖ ಬಿ.ಸಿ. ಉಮಾಪತಿ ಪೀಠದ ಆದಾಯ-ವೆಚ್ಚದ ಸಂಪೂರ್ಣ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಮಂಡಿಸಿದ್ದಾರೆ. ವಚನಾನಂದ ಶ್ರೀಗಳ ಆರೋಪಕ್ಕೆ ಉತ್ತರವಾಗಿ ಈ ಕ್ರಮ. ಸುದ್ದಿಗೋಷ್ಠಿ ವೇಳೆ ಕೇಂದ್ರ ಸಚಿವ ವಿ. ಸೋಮಣ್ಣ ಮಧ್ಯಪ್ರವೇಶಿಸಿ ಸಂಧಾನಕ್ಕೆ ಪ್ರಯತ್ನಿಸಿದರು. ಸಮಾಜದ ಗೌರವ ಮುಖ್ಯ ಎಂದು ಉಮಾಪತಿ ತಮ್ಮ ನಿರ್ಧಾರ ಸಮರ್ಥಿಸಿಕೊಂಡರು.

ದಾವಣಗೆರೆ, ಏ.27: ಹರಿಹರದ ಪಂಚಮಸಾಲಿ ಪೀಠದ ಅಭಿವೃದ್ಧಿ ಕಾರ್ಯಗಳ ಲೆಕ್ಕಾಚಾರದ ವಿಚಾರವಾಗಿ ಉಂಟಾಗಿರುವ ಗೊಂದಲಗಳ ನಡುವೆ, ಉದ್ಯಮಿ ಮತ್ತು ಟ್ರಸ್ಟ್ ಪ್ರಮುಖರಾದ ಬಿ.ಸಿ. ಉಮಾಪತಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಪೀಠದ ಸಂಪೂರ್ಣ ಆದಾಯ ಮತ್ತು ವೆಚ್ಚದ ಲೆಕ್ಕವನ್ನು ಸಾರ್ವಜನಿಕವಾಗಿ ಮಂಡಿಸಿದರು. ವಿಶೇಷವೆಂದರೆ, ಲೆಕ್ಕ ನೀಡುವ ಸಂದರ್ಭದಲ್ಲೇ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಉಮಾಪತಿ ಅವರಿಗೆ ಕರೆ ಮಾಡಿ ಸಂಧಾನದ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಸುದ್ದಿಗೋಷ್ಠಿ ಆರಂಭವಾಗುತ್ತಿದ್ದಂತೆಯೇ ವಿ. ಸೋಮಣ್ಣ ಅವರು ಉಮಾಪತಿ ಅವರಿಗೆ ಕರೆ ಮಾಡಿದರು. “ಹೆಚ್ಚು ಮಾತನಾಡಬೇಡಿ, ಸುಮ್ಮನೆ ನಿಮ್ಮ ಕೆಲಸ ಮಾಡಿ” ಎಂದು ಸೋಮಣ್ಣ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಉಮಾಪತಿ, “ನನ್ನ ಮರ್ಯಾದೆಗಿಂತ ಸಮಾಜದ ಮರ್ಯಾದೆ ಮುಖ್ಯ. ಸಮಾಜದ ಮುಂದೆ ಸತ್ಯ ಹೇಳದಿದ್ದರೆ ನೋವಾಗುತ್ತದೆ. ಅವರು (ವಚನಾನಂದ ಶ್ರೀಗಳು) ನಾನೇನೋ ಹಣ ತಿಂದಿದ್ದೇನೆ ಎಂಬಂತೆ ಮಾತನಾಡುತ್ತಿದ್ದಾರೆ, ಹಾಗಾಗಿ ಲೆಕ್ಕ ಕೊಡುವುದು ಅನಿವಾರ್ಯ” ಎಂದು ಉತ್ತರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More