ನೀವು ಸಖತ್ ಮಿಂಚುತ್ತಿದ್ದೀರಿ… ರಹಸ್ಯವೇನು? ಪ್ರಧಾನಿಗೆ ಟೀಮ್ ಇಂಡಿಯಾ ಆಟಗಾರ್ತಿಯ ಪ್ರಶ್ನೆ
India Women vs South Africa Women, Final: ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನ ಫೈನಲ್ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಗಿ 52 ರನ್ಗಳಿಂದ ಸೋಲೊಪ್ಪಿಕೊಂಡಿತು.
ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ಆಟಗಾರ್ತಿಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಬುಧವಾರ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಭೇಟಿಯಾದ ಪ್ರಧಾನಿ ಮೋದಿ ಕೆಲ ಹೊತ್ತು ಕುಶಲೋಪರಿ ನಡೆಸಿದರು.
ಈ ಸಂವಾದದ ವೇಳೆ ಟೀಮ್ ಇಂಡಿಯಾ ಆಟಗಾರ್ತಿ ಹರ್ಲೀನ್ ಡಿಯೋಲ್ ಪ್ರಧಾನಿ ಮೋದಿ ಅವರ ಚರ್ಮಕಾಂತಿಯ ರಹಸ್ಯವನ್ನು ಪ್ರಶ್ನಿಸಿ ಗಮನ ಸೆಳೆದರು.
“ಸರ್, ನಿಮ್ಮ ಚರ್ಮ ಯಾವಾಗಲೂ ಹೊಳೆಯುತ್ತಿರುತ್ತದೆ. ದಯವಿಟ್ಟು ನಿಮ್ಮ ಚರ್ಮದ ಆರೈಕೆ ಹೇಗೆಂದು ತಿಳಿಸುವಿರಾ?” ಹರ್ಲೀನ್ ಡಿಯೋಲ್ ನಗುತ್ತಾ ಕೇಳಿದಳು.
ಹರ್ಲೀನ್ ಡಿಯೋಲ್ ಅವರ ಅನಿರೀಕ್ಷಿತ ಪ್ರಶ್ನೆ ಪ್ರಧಾನಿ ಸೇರಿದಂತೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಅಲ್ಲದೆ ಈ ಪ್ರಶ್ನೆಗೆ “ನಾನು ಅದೆಲ್ಲದರ ಬಗ್ಗೆ ಯೋಚಿಸುವುದಿಲ್ಲ” ಎಂದು ಪ್ರಧಾನಿ ಮೋದಿ ಉತ್ತರಿಸಿದರು.
ಇದೇ ವೇಳೆ ಟೀಮ್ ಇಂಡಿಯಾ ಆಟಗಾರ್ತಿ ಸ್ನೇಹ್ ರಾಣಾ, ನೀವು ಹೀಗೆ ಹೊಳೆಯಲು ಕೋಟ್ಯಂತರ ಭಾರತೀಯರ ಪ್ರೀತಿ ಕಾರಣ ಎಂದರು.
ಸ್ನೇಹ್ ರಾಣಾ ಅವರ ಈ ಉತ್ತರಕ್ಕೆ ಮುಗುಳ್ನಗುತ್ತಾ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಅದು ಸಹ ಇರುತ್ತದೆ… ಇದು ಅತ್ಯಂತ ದೊಡ್ಡ ತಾಕತ್ತು. ನಾನು ಸಮಾಜದೊಂದಿಗೆ (ಸರ್ಕಾರ) ಬೆರತು 25 ವರ್ಷಗಳಾಗಿವೆ. ಅದರ ಪ್ರಭಾವ ಕೂಡ ಇರುತ್ತದೆ. ಜನರ ಇಂತಹ ಆಶೀರ್ವಾದವೇ ನನ್ನನ್ನು ಸದಾ ಮಿಂಚುವಂತೆ ಇರಿಸಿದೆ ಎಂದರು.
Video: ಹಾಸ್ಟೆಲ್ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ

