AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾಗೆ ನೀಡಿದ ವಿಶ್ವಕಪ್ ಹಿಂಪಡೆಯಲಿರುವ ಐಸಿಸಿ

India Women vs South Africa Women, Final: ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್​ನ ಫೈನಲ್ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್​ಗಳಲ್ಲಿ 246 ರನ್​ಗಳಿಸಿ ಆಲೌಟ್ ಆಗುವ ಮೂಲಕ 52 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಟೀಮ್ ಇಂಡಿಯಾಗೆ ನೀಡಿದ ವಿಶ್ವಕಪ್ ಹಿಂಪಡೆಯಲಿರುವ ಐಸಿಸಿ
Team India
ಝಾಹಿರ್ ಯೂಸುಫ್
|

Updated on:Nov 04, 2025 | 1:55 PM

Share

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಮಹಿಳಾ ವಿಶ್ವಕಪ್ ಗೆಲ್ಲುವ ಮೂಲಕ ಕೋಟ್ಯಂತರ ಭಾರತೀಯರ  ಕನಸನ್ನು ನನಸು ಮಾಡಿದ್ದಾರೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 52 ರನ್​ಗಳಿಂದ ಮಣಿಸಿ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಈ ವಿಶ್ವ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಹೊಳೆಯುವ ವಿಶ್ವಕಪ್ ಟ್ರೋಫಿಯನ್ನು ಹಸ್ತಾಂತರಿಸಿದರು. ಆದರೆ ಈ ಟ್ರೋಫಿಯನ್ನು ಐಸಿಸಿ ಹಿಂತೆಗೆದುಕೊಳ್ಳಲಿದೆ ಎಂಬ ವಿಚಾರ ಅನೇಕರಿಗೆ ಗೊತ್ತಿಲ್ಲ.

ಐಸಿಸಿ ನಿಯಮದ ಪ್ರಕಾರ, ಚಾಂಪಿಯನ್ ತಂಡಕ್ಕೆ ನೀಡಲಾದ ಟ್ರೋಫಿಯನ್ನು ಫೋಟೊ ಶೂಟ್​ ಬಳಿಕ ಹಿಂಪಡೆಯಲಾಗುತ್ತದೆ. ಅಲ್ಲದೆ ಬದಲಿಯಾಗಿ ಆ ಟ್ರೋಫಿಯ ಪ್ರತಿಕೃತಿಯನ್ನು ನೀಡಲಾಗುತ್ತದೆ. ಅಂದರೆ ನಕಲಿ ಟ್ರೋಫಿಯನ್ನು ಹಸ್ತಾಂತರಿಸಲಾಗುತ್ತದೆ.

ಐಸಿಸಿ ಇಂತಹದೊಂದು ನಿಯಮ ರೂಪಿಸಿರುವುದು 26 ವರ್ಷಗಳ ಹಿಂದೆ. ಈ ನಿಯಮದ ಪ್ರಕಾರ, ಯಾವುದೇ ತಂಡಕ್ಕೆ ಮೂಲ ಟ್ರೋಫಿಯನ್ನು ನೀಡಲಾಗುವುದಿಲ್ಲ. ಬದಲಾಗಿ ಅದನ್ನೇ ಹೋಲುವ ಮತ್ತೊಂದು ಡಮ್ಮಿ ಟ್ರೋಫಿ ನೀಡಲಾಗುತ್ತದೆ.

ಮೂಲ ಟ್ರೋಫಿಯನ್ನು ಏನು ಮಾಡಲಿದ್ದಾರೆ?

ಚಾಂಪಿಯನ್ ತಂಡಕ್ಕೆ ಹಸ್ತಾಂತರಿಸಿದ ಮೂಲ ಟ್ರೋಫಿಯನ್ನು ಹಿಂಪಡೆದ ಬಳಿಕ ಅದನ್ನು ದುಬೈನಲ್ಲಿರುವ ಐಸಿಸಿ ಕಚೇರಿಯಲ್ಲಿ ಇರಿಸಲಾಗುತ್ತದೆ. ಅಲ್ಲದೆ ಮುಂದಿನ ಏಕದಿನ ವಿಶ್ವಕಪ್​ವರೆಗೂ ಮೂಲ ಟ್ರೋಫಿ ಐಸಿಸಿ ಕಚೇರಿಯಲ್ಲೇ ಇರಲಿದೆ.

ಟ್ರೋಫಿ ಹಿಂಪಡೆಯುತ್ತಿರುವುದೇಕೆ?

ಐಸಿಸಿ ಟ್ರೋಫಿಯನ್ನು ಹಿಂಪಡೆಯುವ ನಿಯಮವನ್ನು ಜಾರಿಗೊಳಿಸಿರುವುದು ಮೂಲ ಟ್ರೋಫಿಯ ಕಳ್ಳತನ ಅಥವಾ ಹಾನಿಯನ್ನು ತಡೆಯಲು. ಅಂದರೆ ಐಸಿಸಿ ಆಯೋಜಿಸುವ ಟೂರ್ನಿಗಳಿಗೆ ಒಂದೊಂದು ಟ್ರೋಫಿಗಳನ್ನು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಈ ಒರಿಜಿನಲ್ ಟ್ರೋಫಿಗಳಿಗೆ ಹಾನಿಯಾಗುವುದನ್ನು ತಡೆಯಲು ಐಸಿಸಿ ಮೂಲ ಟ್ರೋಫಿಯನ್ನು ಹಿಂಪಡೆಯುತ್ತಿದೆ. ಬದಲಾಗಿ ಅದನ್ನೇ ಹೋಲುವ ಡಮ್ಮಿ ಟ್ರೋಫಿಯನ್ನು ನೀಡಲಾಗುತ್ತದೆ.

ಮಹಿಳಾ ವಿಶ್ವಕಪ್​​ನ ತೂಕ ಎಷ್ಟು?

ಮಹಿಳಾ ಏಕದಿನ ವಿಶ್ವಕಪ್​ ಟ್ರೋಫಿಯು ಸರಿಸುಮಾರು 11 ಕೆಜಿ ತೂಕವಿದ್ದು, ಸುಮಾರು 60 ಸೆಂ.ಮೀ ಎತ್ತರವಿದೆ. ಇದು ಸ್ಟಂಪ್‌ಗಳು ಮತ್ತು ಬೇಲ್‌ಗಳಂತಹ ಆಕಾರದ ಮೂರು ಬೆಳ್ಳಿ ಸ್ತಂಭಗಳನ್ನು ಹೊಂದಿದೆ. ಅಲ್ಲದೆ ಅದರ ಮೇಲೆ ಚಿನ್ನದ ಗ್ಲೋಬ್ ಅನ್ನು ಇರಿಸಲಾಗಿದೆ.

ಇದನ್ನೂ ಓದಿ: AUS vs IND: ಆಸ್ಟ್ರೇಲಿಯಾ ತಂಡದಿಂದ ಮೂವರು ರಿಲೀಸ್..!

ಇನ್ನು ಟ್ರೋಫಿಯ ಮೇಲೆ ಎಲ್ಲಾ ವಿಜೇತ ತಂಡಗಳ ಹೆಸರುಗಳನ್ನು ಕೆತ್ತಲಾಗಿದೆ. ಕಳೆದ 13 ಆವೃತ್ತಿಗಳಲ್ಲಿ  ಆಸ್ಟ್ರೇಲಿಯಾ (7), ಇಂಗ್ಲೆಂಡ್ (4), ನ್ಯೂಝಿಲೆಂಡ್ (1) ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿದ್ದವು. ಇದೀಗ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದು ಟ್ರೋಫಿ ಮೇಲೆ ತನ್ನ ಹೆಸರು ಕೂಡ ಹಚ್ಚಾಗುವಂತೆ ಮಾಡಿದೆ.

Published On - 1:55 pm, Tue, 4 November 25

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ