AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಗ್ನಲ್ ಜಂಪ್ ಮಾಡಿ ಬಿಎಂಟಿಸಿ ಬಸ್ ಅಡಿ ಬೀಳಲಿದ್ದ ಬೈಕ್ ಸವಾರ ಜಸ್ಟ್ ಮಿಸ್: ವಿಡಿಯೋ ವೈರಲ್

ಸಿಗ್ನಲ್ ಜಂಪ್ ಮಾಡಿ ಬಿಎಂಟಿಸಿ ಬಸ್ ಅಡಿ ಬೀಳಲಿದ್ದ ಬೈಕ್ ಸವಾರ ಜಸ್ಟ್ ಮಿಸ್: ವಿಡಿಯೋ ವೈರಲ್

ರಾಚಪ್ಪಾಜಿ ನಾಯ್ಕ್
| Edited By: |

Updated on:Nov 06, 2025 | 11:38 AM

Share

ಬೈಕ್ ಸವಾರನೊಬ್ಬ ಸಿಗ್ನಲ್ ಜಂಪ್ ಮಾಡಿದ್ದು, ವೇಗವಾಗಿ ಬಂದ ಬಿಎಂಟಿಸಿ ಬಸ್ ಅಡಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ನವೆಂಬರ್ 4 ರಂದು ಮಧ್ಯಾಹ್ನ ಬೆಂಗಳೂರಿನ ದೇವೇಗೌಡ ಪೆಟ್ರೊಲ್ ಬಂಕ್ ಜಂಕ್ಷನ್​​ನಲ್ಲಿ ನಡೆದಿದೆ. ಘಟನೆಯ ದೃಶ್ಯ ಕಾರಿನ ಡ್ಯಾಶ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರು, ನವೆಂಬರ್ 6: ಸಿಗ್ನಲ್ ಜಂಪ್ ಮಾಡಿ ಬಂದ ಬೈಕ್ ಸವಾರ ಬಿಎಂಟಿಸಿ ಬಸ್ ಅಡಿ ಬೀಳುವುದರಲ್ಲಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಂಗಳೂರಿನ ದೇವೇಗೌಡ ಪೆಟ್ರೊಲ್ ಬಂಕ್ ಜಂಕ್ಷನ್​​ನಲ್ಲಿ ನಡೆದಿದೆ. ಸಿಗ್ನಲ್ ಜಂಪ್ ಮಾಡಿ ಬಂದ ಬೈಕ್​ ಸವಾರ ಎದುರು ನಿಂತಿದ್ದ ಕಾರಿಗೆ ಗುದ್ದಿ ಪರಾರಿಯಾಗಿದ್ದಾನೆ. ಬನಶಂಕರಿ ಕಡೆಯಿಂದ ಬಂದ ಬೈಕ್ ಸವಾರ ಕಾಮಾಕ್ಯ ಕಡೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಅಡಿ ಬೀಳುವುದರಿಂದ ಜಸ್ಟ್ ಮಿಸ್ ಆಗಿದ್ದಾನೆ. ನವೆಂಬರ್ 4 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದ ಘಟನೆಯ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 06, 2025 11:37 AM

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನವರು. ಕಳೆದ 2 ವರ್ಷದಿಂದ ಟಿವಿ9 ಕನ್ನಡದ ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ ಅನುಭವವಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದಾರೆ.

Read More