Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದಲಿ ಆಟಗಾರನಾಗಿ ಕಣಕ್ಕಿಳಿದು ಇಡೀ ಪಂದ್ಯದ ಚಿತ್ರಣ ಬದಲಿಸಿದ ಹರ್ಷಿತ್ ರಾಣಾ

ಬದಲಿ ಆಟಗಾರನಾಗಿ ಕಣಕ್ಕಿಳಿದು ಇಡೀ ಪಂದ್ಯದ ಚಿತ್ರಣ ಬದಲಿಸಿದ ಹರ್ಷಿತ್ ರಾಣಾ

ಝಾಹಿರ್ ಯೂಸುಫ್
|

Updated on:Feb 01, 2025 | 7:19 AM

India vs England, 4th T20I: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್​ಗಳಲ್ಲಿ 181 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 19.4 ಓವರ್​ಗಳಲ್ಲಿ 166 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 15 ರನ್​ಗಳ ಗೆಲುವು ಸಾಧಿಸಿತು. ಈ ಗೆಲುವಿನ ರೂವಾರಿಗಳಲ್ಲಿ ಹರ್ಷಿತ್ ರಾಣಾ ಕೂಡ ಒಬ್ಬರು.

ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್​ಗಳಲ್ಲಿ 181 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 19.4 ಓವರ್​ಗಳಲ್ಲಿ 166 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 15 ರನ್​ಗಳ ಗೆಲುವು ಸಾಧಿಸಿತು. ಈ ಗೆಲುವಿನ ರೂವಾರಿಗಳಲ್ಲಿ ಹರ್ಷಿತ್ ರಾಣಾ ಕೂಡ ಒಬ್ಬರು. ಆದರೆ ಈ ಪಂದ್ಯದ ಪ್ಲೇಯಿಂಗ್ ಇಲೆವೆನ್​ನಲ್ಲಿ ರಾಣಾ ಸ್ಥಾನ ಪಡೆದಿರಲಿಲ್ಲ ಎಂಬುದು ವಿಶೇಷ. ಅಂದರೆ ದ್ವಿತೀಯ ಇನಿಂಗ್ಸ್​ ವೇಳೆ ಹರ್ಷಿತ್ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದರು.

ಬ್ಯಾಟಿಂಗ್ ವೇಳೆ ಶಿವಂ ದುಬೆ ಅವರ ಹೆಲ್ಮೆಟ್​ಗೆ ಚೆಂಡು ಬಡಿದಿದ್ದರಿಂದ ಅವರು ಫೀಲ್ಡಿಂಗ್​ಗೆ ಇಳಿದಿರಲಿಲ್ಲ. ಇತ್ತ ಐಸಿಸಿ ನಿಯಮದ ಪ್ರಕಾರ, ಯಾವುದಾದರೂ ಆಟಗಾರ ಗಾಯಗೊಂಡರೆ, ಅಥವಾ ಇನ್ನಿತರೆ ಕಾರಣಗಳಿಂದ ಕಣಕ್ಕಿಳಿಯಲು ಅಸಾಧ್ಯವಾದರೆ ಅವರ ಬದಲಿಯಾಗಿ ಮತ್ತೋರ್ವನನ್ನು ಕಣಕ್ಕಿಳಿಸಬಹುದು.
ಈ ನಿಯಮದ ಪ್ರಕಾರ, ಟೀಮ್ ಇಂಡಿಯಾ ಹರ್ಷಿತ್ ರಾಣಾ ಅವರನ್ನು ಶಿವಂ ದುಬೆ ಅವರ ಕನ್ಕ್ಯುಶನ್ ಬದಲಿಯಾಗಿ ಕಣಕ್ಕಿಳಿಸಿತ್ತು. ಹೀಗೆ ಚೊಚ್ಚಲ ಟಿ20 ಪಂದ್ಯವಾಡಿದ ಹರ್ಷಿತ್ ಭರ್ಜರಿ ಬೌಲಿಂಗ್ ಸಂಘಟಿಸಿದರು.

ತಾನೆಸೆದ ಮೊದಲ ಓವರ್​ನಲ್ಲಿ ಕೇವಲ 5 ರನ್ ನೀಡಿದ ಹರ್ಷಿತ್ ರಾಣಾ ಡೇಂಜರಸ್ ಲಿಯಾಮ್ ಲಿವಿಂಗ್​ಸ್ಟೋನ್​ (9) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ತನ್ನ 2ನೇ ಓವರ್​ನಲ್ಲಿ 18 ರನ್ ಚಚ್ಚಿಸಿಕೊಂಡರೂ, ಮೂರನೇ ಓವರ್​ನಲ್ಲಿ ಹರ್ಷಿತ್ ನೀಡಿದ್ದು ಕೇವಲ 4 ರನ್ ಮಾತ್ರ. ಅಲ್ಲದೆ ಜೇಕಬ್ ಬೆಥೆಲ್ (6) ವಿಕೆಟ್ ಪಡೆದರು.

ಹಾಗೆಯೇ 19ನೇ ಓವರ್​ನಲ್ಲಿ ಕೇವಲ 6 ರನ್ ನೀಡಿ ಜೇಮಿ ಓವರ್ಟನ್ (19) ವಿಕೆಟ್ ಕಬಳಿಸಿದರು. ಈ ಮೂಲಕ 4 ಓವರ್​ಗಳಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದರು ಮಿಂಚಿದರು. ಹೀಗೆ ಬದಲಾಗಿ ಬಂದು 3 ವಿಕೆಟ್​ ಕಬಳಿಸಿದ್ದಲ್ಲದೇ ನಿರ್ಣಾಯಕ ಹಂತದಲ್ಲಿ ಉತ್ತಮ ದಾಳಿ ಸಂಘಟಿಸಿ ಹರ್ಷಿತ್ ರಾಣಾ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಈ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

 

 

Published on: Feb 01, 2025 07:18 AM