ನಿಮಗೆ 5 ವರ್ಷಗಳ ನಂತರ ನಮ್ಮ ಗ್ರಾಮ ನೆನಪಿಗೆ ಬಂತಾ? ಶಾಸಕ ಹರ್ಷವರ್ಧನ್​ಗೆ ಗ್ರಾಮಸ್ಥರಿಂದ ತರಾಟೆ

ನಿಮಗೆ 5 ವರ್ಷಗಳ ನಂತರ ನಮ್ಮ ಗ್ರಾಮ ನೆನಪಿಗೆ ಬಂತಾ? ಶಾಸಕ ಹರ್ಷವರ್ಧನ್​ಗೆ ಗ್ರಾಮಸ್ಥರಿಂದ ತರಾಟೆ

ಗಂಗಾಧರ​ ಬ. ಸಾಬೋಜಿ
|

Updated on: Apr 03, 2023 | 9:58 PM

ಮತಯಾಚನೆಗೆ ಬಂದಿದ್ದ ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್​ರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವಂತಹ ಘಟನೆ ನಂಜನಗೂಡು ಕ್ಷೇತ್ರದ ದೇವನೂರು ಗ್ರಾಮದಲ್ಲಿ ನಡೆದಿದೆ.

ಮೈಸೂರು: ಮತಯಾಚನೆಗೆ ಬಂದಿದ್ದ ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್​ರನ್ನು (MLA Harshvardhan) ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವಂತಹ ಘಟನೆ ನಂಜನಗೂಡು ಕ್ಷೇತ್ರದ ದೇವನೂರು ಗ್ರಾಮದಲ್ಲಿ ನಡೆದಿದೆ. ನಿಮಗೆ 5 ವರ್ಷಗಳ ನಂತರ ನಮ್ಮ ಗ್ರಾಮ ನೆನಪಿಗೆ ಬಂತಾ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ನಿಮ್ಮ 5 ವರ್ಷಗಳ ಆಡಳಿತದ ಅವಧಿಯಲ್ಲಿ ಏನೂ ಅಭಿವೃದ್ಧಿ ಆಗಿಲ್ಲ. ಮಠದ ಮುಂಭಾಗದಲ್ಲಿ ಒಂದು ಬೀದಿ ದೀಪ ಕೂಡ ಸರಿಪಡಿಸಲು ಆಗಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕೂಡ ಕಲ್ಪಿಸಿಲ್ಲ ಎಂದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ್, ನಗರಸಭೆ ಅಧ್ಯಕ್ಷ ಮಹದೇವಸ್ವಾಮಿ ಸೇರಿದಂತೆ ಹಲವರಿಗೆ ಗ್ರಾಮಸ್ಥರಿಂದ ತೀವ್ರ ತರಾಟೆ ತೆಗೆದುಕೊಳ್ಳಲಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.