Bihu festival next week: ರೊಂಗಾಲಿ ಬಿಹು ಆಚರಣೆಗೆ ಮುನ್ನ ಅಸ್ಸಾಂ ಕೊಕ್ರಜಾರ್‌ನಲ್ಲಿ ಬಿಹು ನೃತ್ಯ ತರಬೇತಿ ಕಾರ್ಯಾಗಾರ

Bihu festival next week: ರೊಂಗಾಲಿ ಬಿಹು ಆಚರಣೆಗೆ ಮುನ್ನ ಅಸ್ಸಾಂ ಕೊಕ್ರಜಾರ್‌ನಲ್ಲಿ ಬಿಹು ನೃತ್ಯ ತರಬೇತಿ ಕಾರ್ಯಾಗಾರ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 03, 2023 | 5:34 PM

ಢೋಲ್ ಮತ್ತು ಬಿಹು ನೃತ್ಯದ ಕಾರ್ಯಾಗಾರಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಆಸಕ್ತರು ಆಗಮಿಸುತ್ತಿದ್ದಾರೆ. ಕಾರ್ಯಾಗಾರದ ಮೊದಲ ದಿನವಾಗಿದ್ದ ನಿನ್ನೆ (ರವಿವಾರ) 70 ಜನ ಪಾಲ್ಗೊಂಡಿದ್ದರು.

ಕೋಕ್ರಾಜಾರ್ (ಅಸ್ಸಾಂ): ಕೋಕ್ರಾಜಾರ್ ಜಿಲ್ಲೆಯ ಫಕೀರಾಗ್ರಾಮ್ ಶಿಶು ಉದ್ಯಾನಲ್ಲಿ ಒಂದು ವಾರ ಅವಧಿಯ ಬಿಹು ಕಾರ್ಯಾಗಾರ (Bihu Workshop) ಆರಂಭಗೊಂಡಿದೆ. ಕಲಾ ಸಂಸ್ಕೃತಿ ವಿಕಾಸ್ ಮಂಚ್ (Kala Sanskriti Vikas Manch) ಅಯೋಜಿಸಿರುವ ಕಾರ್ಯಾಗಾರವು ರವಿವಾರ ಶುರುವಾಗಿದ್ದು ಅಸ್ಸಾಂನಲ್ಲಿ ರೊಂಗಾಲಿ ಬಿಹು ಉತ್ಸವ (Rongali Bihu Utsav) ಏಪ್ರಿಲ್ 14-16 ರವರೆಗೆ ನಡೆಯಲಿದೆ.

ಇದನ್ನೂ ಓದಿ: ಬಿಜೆಪಿಯಿಂದ ಮೀಸಲಾತಿ ದುರ್ಬಳಕೆ: ‘ಸಂವಿಧಾನ ಬಚಾವೋ, ದೇಶ್​ ಬಚಾವೋ’ ಹೆಸರಲ್ಲಿ ಕಾಂಗ್ರೆಸ್ ಪ್ರತಿಭಟನೆ

‘ಜನರಿಗೆ ಢೋಲ್ ಮತ್ತು ಬಿಹು ನೃತ್ಯದ ಅಭ್ಯಾಸ ಮಾಡಿಸಲು ಕಾರ್ಯಗಾರವನ್ನು ಆಯೋಜಿಸಲಾಗಿದೆ. ಜಾನಪದ ನೃತ್ಯ ಪ್ರಕಾರವಾಗಿರುವ ಬಿಹು ಡ್ಯಾನ್ಸ್ ನ ನಿಯಮಾವಳಿಗಳನ್ನು ಜನರಿಗೆ ತಿಳಿಸುವ ಪ್ರಯತ್ನ ನಾವು ಮಾಡುತ್ತಿದ್ದೇವೆ,’ ಎಂದು ಫಕೀರಾಗ್ರಾಮ್ ಕಲಾ ಸಂಸ್ಕೃತಿ ವಿಕಾಸ್ ಮಂಚ್ ನ ಕಾರ್ಯದರ್ಶಿ ಧೃವ ಕುಮಾರ್ ಮೆಹದಿ ಹೇಳುತ್ತಾರೆ.

ಢೋಲ್ ಮತ್ತು ಬಿಹು ನೃತ್ಯದ ಕಾರ್ಯಾಗಾರಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಆಸಕ್ತರು ಆಗಮಿಸುತ್ತಿದ್ದಾರೆ. ಕಾರ್ಯಾಗಾರದ ಮೊದಲ ದಿನವಾಗಿದ್ದ ನಿನ್ನೆ (ರವಿವಾರ) 70 ಜನ ಪಾಲ್ಗೊಂಡಿದ್ದರು. ವಿನಯ್ ಬೋರಾ ಮತ್ತು ಗೀತೊಮೊನಿ ಬೋರಾ ಮೊದಲಾದ ಕಲಾವಿದರು ನೃತ್ಯವನ್ನು ಹೇಳಿಕೊಟ್ಟರು.

ಇದನ್ನೂ ಓದಿ: Ramadan 2023: ರಂಜಾನ್ ಉಪವಾಸ ಮಾಡುವವರು ತಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಲು ಇಲ್ಲಿವೆ ಕೆಲ ಟಿಪ್ಸ್

‘ಬಿಹು ಒಂದು ವರ್ಗಕ್ಕೆ ಮೀಸಲಾದ ಹಬ್ಬವಲ್ಲ. ಎಲ್ಲ್ಲ ಧರ್ಮ-ಜಾತಿಗಳ ಜನ ಇದರಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ದೇಶದ ಬೇರೆ ಭಾಗಗಳ ಜನರಿಗೆ ಕಾಳಿ ಪೂಜೆ ಮತ್ತು ಹೋಲಿ ಎಷ್ಟು ಪ್ರಾಮುಖ್ಯವೋ ಅಸ್ಸಾಂ ಜನತೆಗೆ ಬಿಹು ಅಷ್ಟೇ ದೊಡ್ಡ ಮತ್ತು ಅತಿ ಮುಖ್ಯವಾದ ಹಬ್ಬವಾಗಿದೆ,’ ಎಂದು ಬೋಧಕ ಮತ್ತು ಕಲಾವಿದ ವಿನಯ್ ಬೋರಾ ಹೇಳುತ್ತಾರೆ.
ಮುಂದಿನ ವಾರ ಆಚರಿಸಲ್ಪಡುವ ರೊಂಗಾಲಿ ಬಿಹು ಹಬ್ಬ ಕುರಿತಾದ ಉತ್ಸುಕತೆ ಮತ್ತು ರೋಮಾಂಚನ ಕೇವಲ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಜನರಲ್ಲಿ ಮಾತ್ರ ಅಲ್ಲ, ತರಬೇತಿ ನೀಡುವ ಮತ್ತು ಆಯೋಜಕರ ಮುಖಗಳಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ