ಹಾಸನಾಂಬೆ ದರ್ಶನೋತ್ಸವ 2026: ಭವ್ಯ ಅಲಂಕಾರದೊಂದಿಗೆ ಭಕ್ತರ ಸ್ವಾಗತಕ್ಕೆ ಸಜ್ಜು
ಹಾಸನಾಂಬೆ ದರ್ಶನೋತ್ಸವ 2026 ಕ್ಕೆ ಕ್ಷಣಗಣನೆ ಶುರುವಾಗಿದೆ. ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬ ದೇಗುಲ ಭಕ್ತರ ಸ್ವಾಗತಕ್ಕೆ ಭವ್ಯವಾಗಿ ಅಲಂಕಾರಗೊಂಡಿದೆ. ಹೂವುಗಳು, ಜಾನೂರ್ ಕಲೆ ಹಾಗೂ ದೀಪದ ಪ್ರತಿಕೃತಿಯೊಂದಿಗೆ ಸಿದ್ಧವಾಗಿರುವ ದೇವಾಲಯದಲ್ಲಿ ಲಕ್ಷಾಂತರ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ. ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ, ಶಕ್ತಿ ದೇವತೆ ಶ್ರೀ ಹಾಸನಾಂಬ ದೇವಿಯ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ನವೆಂಬರ್ 11 ರವರೆಗೆ ನಡೆಯಲಿರುವ ಈ ಜಾತ್ರಾ ಮಹೋತ್ಸವಕ್ಕಾಗಿ ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ದೇಗುಲಗಳು ಅತಿ ಸುಂದರವಾಗಿ ಅಲಂಕೃತಗೊಂಡಿವೆ. ಜಿಲ್ಲಾಡಳಿತವು ಲಕ್ಷಾಂತರ ಭಕ್ತರನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ದೇಗುಲದ ಆವರಣವನ್ನು ಹೂವಿನ ಅಲಂಕಾರ, ತೆಂಗಿನ ಗರಿ ಕಲೆ ಬಳಸಿ ದೇವಲೋಕದಂತೆ ಸೃಷ್ಟಿಸಲಾಗಿದೆ. ದೇಗುಲದ ಮುಂಭಾಗದಲ್ಲಿ ಚಿತ್ತಾಕರ್ಷಕ ಆರ್ಚ್ ನಿರ್ಮಿಸಲಾಗಿದ್ದು, ನಂದಾದೀಪದ ಪ್ರತಿಕೃತಿಯನ್ನು ಹೂವಿನಿಂದ ವಿಶೇಷವಾಗಿ ರಚಿಸಲಾಗಿದೆ. ಭಕ್ತರಿಗಾಗಿ ಸುಮಾರು 9.5 ಕಿಲೋಮೀಟರ್ ಉದ್ದದ ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸಲಾಗಿದ್ದು, ನಾಳೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 29, 2026 09:15 AM
Loading...
Unable to load recommendations.
Follow Us
