ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ ಶಿವಲಿಂಗೇಗೌಡ
ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಶಕ್ತಿ ದೇವತೆ ಹಾಸನಾಂಬೆಯ ದೇಗುಲದ ಬಾಗಿಲು ನಿನ್ನೆ (ಅಕ್ಟೋಬರ್ 29) ಓಪನ್ ಆಗಿದ್ದು, ಇಂದಿನಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಸಾವಿರಾರು ಭಕ್ತರು ತಾಯಿ ದರ್ಶನಕ್ಕೆ ಆಗಮಿಸುತ್ತಿದ್ದು, ಸನ್ನಿಧಾನದಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಹೀಗಾಗಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು ಫೀಲ್ಡ್ಗೆ ಇಳಿದಿದ್ದು, ಪೊಲೀಸರ ಜೊತೆ ಕೈಜೋಡಿಸಿ ಭಕ್ತರನ್ನು ಸಾಲಾಗಿ ಕಳುಹಿಸುತ್ತಿದ್ದಾರೆ. ಹಾಸನಾಂಬೆ ಗರ್ಭಗುಡಿಯ ಎದುರು ನಿಂತುಕೊಂಡು ಭಕ್ತರನ್ನು ಬೇಗ ಬೇಗ ಮುಂದೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ.
ಹಾಸನ, (ಅಕ್ಟೋಬರ್ 30): ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಶಕ್ತಿ ದೇವತೆ ಹಾಸನಾಂಬೆಯ ದೇಗುಲದ ಬಾಗಿಲು ನಿನ್ನೆ (ಅಕ್ಟೋಬರ್ 29) ಓಪನ್ ಆಗಿದ್ದು, ಇಂದಿನಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಸಾವಿರಾರು ಭಕ್ತರು ತಾಯಿ ದರ್ಶನಕ್ಕೆ ಆಗಮಿಸುತ್ತಿದ್ದು, ಸನ್ನಿಧಾನದಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಹೀಗಾಗಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು ಫೀಲ್ಡ್ಗೆ ಇಳಿದಿದ್ದು, ಪೊಲೀಸರ ಜೊತೆ ಕೈಜೋಡಿಸಿ ಭಕ್ತರನ್ನು ಸಾಲಾಗಿ ಕಳುಹಿಸುತ್ತಿದ್ದಾರೆ. ಹಾಸನಾಂಬೆ ಗರ್ಭಗುಡಿಯ ಎದುರು ನಿಂತುಕೊಂಡು ಭಕ್ತರನ್ನು ಬೇಗ ಬೇಗ ಮುಂದೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

