Loading video

ಉದ್ಯೋಗ ಅರಿಸಿ ಬಂದ ಬಿಹಾರ ಮೂಲದ ಕುಟುಂಬ: ಸಾರ್ವಜನಿಕ ಶೌಚಾಲಯದಲ್ಲಿ ಕೆಲಸ, ಅಲ್ಲೇ ವಾಸ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 23, 2023 | 7:28 PM

ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಕೋಟೆ ಬಡಾವಣೆ ಸಮೀಪವಿರುವ ಸಾರ್ವಜನಿಕ ಶೌಚಾಲಯದಲ್ಲಿ ಬಿಹಾರ ಮೂಲದ ಕುಟುಂಬ ಒಂದು ನೆಲೆಸಿದೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಾಣ ಮಾಡಿರುವ ಶೌಚಾಲಯದಲ್ಲಿ ಬಡ ಕುಟುಂಬ ವಾಸಮಾಡುತ್ತಿದೆ. ಶೌಚಾಲಯದಲ್ಲೇ ಅಡುಗೆ, ಊಟ ಹಾಗೂ ರಾತ್ರಿ ಅಲ್ಲೇ ಮಲಗುತ್ತಾರೆ.

ಹಾಸನ, ಡಿಸೆಂಬರ್​ 23: ಉದ್ಯೋಗ ಅರಿಸಿ ಬಂದ ಬಿಹಾರ ಮೂಲದ ಕುಟುಂಬ ಒಂದು ಸಾರ್ವಜನಿಕ ಶೌಚಾಲಯ (public toilet) ದಲ್ಲೇ ಕೆಲಸ ಮಾಡಿ ಅಲ್ಲೇ ವಾಸ ಮಾಡುತ್ತಿರುವಂತಹ ಘಟನೆ ಜಿಲ್ಲೆಯ ಅರಕಲಗೂಡು ಪಟ್ಟಣದ ಕೋಟೆ ಬಡಾವಣೆ ಸಮೀಪವಿರುವ ಸಾರ್ವಜನಿಕ ಶೌಚಾಲಯದಲ್ಲಿ ಕಂಡಬಂದಿದೆ. ಬಿಹಾರ ಮೂಲದ ಅರವಿಂದ್ ಕುಮಾರ್​, ಅಂಜು ಹಾಗೂ ಇಬ್ಬರು ವಿಶೇಷ ಚೇತನ ಮಕ್ಕಳೊಂದಿಗೆ ವಾಸವಿದ್ದಾರೆ.  ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಾಣ ಮಾಡಿರುವ ಶೌಚಾಲಯದಲ್ಲಿ ಬಡ ಕುಟುಂಬ ವಾಸಮಾಡುತ್ತಿದೆ. ಶೌಚಾಲಯದಲ್ಲಿ ಕೆಲಸ ಮಾಡಿಕೊಂಡಿದ್ದು, ವಾಸಿಸಲು ಮನೆಯಿಲ್ಲದೇ ಶೌಚಾಲಯದಲ್ಲೇ ವಾಸ ಮಾಡುತ್ತಿದ್ದಾರೆ. ಶೌಚಾಲಯದಲ್ಲೇ ಅಡುಗೆ, ಊಟ ಹಾಗೂ ರಾತ್ರಿ ಅಲ್ಲೇ ಮಲಗುತ್ತಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಂಡು ಕಾಣದಂತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.