ಹಿಜಾಬ್ ವಿವಾದ; ಲೀಗಲ್ ತಂಡ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ: ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅಸಂಬದ್ಧವಾದುದನ್ನು ಮಾತಾಡುತ್ತಾರೆ. ಇಲ್ಲಿ ಅವರು ಹೇಳಿದ್ದನ್ನು ಸಿದ್ದರಾಮಯ್ಯ ನಿನ್ನೆ ಮೈಸೂರಲ್ಲಿ ಹೇಳಬೇಕಿತ್ತು. ಆದರೆ, ತನ್ನ ಬಾಸ್ ತಪ್ಪು ಅಂತ ಅವರಿಗೆ ಹೇಳಲಾಗದು. ಹಾಗಾಗೇ, ಅವರನ್ನು ಸಮರ್ಥಿಸಿಕೊಂಡು ಮಾತಾಡುವ ವ್ಯರ್ಥ ಪ್ರಯತ್ನ ಮಾಡುತ್ತಾರೆ.
ಶಿವಮೊಗ್ಗ: ಹಿಜಾಬ್ ನಿಷೇಧ ಆದೇಶವನ್ನು ವಾಪಸ್ಸು ಪಡೆಯುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಿನ್ನೆ ಮೈಸೂರಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಪ್ರತಿಕ್ರಿಯೆ ನೀಡಿದರು. ಚುನಾವಣೆಗೆ ಮೊದಲು ಕೂಡ ತಮ್ಮ ಪಕ್ಷ ಹಿಜಾಬ್ ನಿಷೇಧವನ್ನು (hijab ban) ವಿರೋಧಿಸಿತ್ತು. ನಿನ್ನೆ ಮೈಸೂರಲ್ಲಿ ಯಾರೋ ಒಬ್ಬರು ಹಿಜಾಬ್ ಬಗ್ಗೆ ಕೇಳಿದಾಗ, ವಿಶಾಲಹೃದಯಿ ಆಗಿರುವ ಮುಖ್ಯಮಂತ್ರಿ ನಿಮ್ಮ ಸಂಪ್ರದಾಯ ಹಾಗೂ ಪದ್ಧತಿಗಳನ್ನು ಆಚರಿಸಲು ಯಾವುದೇ ಅಡ್ಡಿಯಿಲ್ಲ ಅಂತ ಹೇಳಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು. ಬಿಜೆಪಿ ಚುನಾವಣೆ ಹತ್ತಿರ ಬಂದಾಗ ಪರೇಶ್ ಮೇಸ್ತಾ, ಹಿಜಾಬ್ ನಂಥ ವಿಷಯಗಳನ್ನು ಮುನ್ನೆಲೆಗೆ ತರುತ್ತದೆ. ಆದರೆ, ಹಿಜಾಬ್ ವಿವಾದ ಕೋರ್ಟ್ ನಲ್ಲಿ ಕೂಡ ಇರೋದ್ರಿಂದ ಬಹಳ ಸೂಕ್ಷ್ಮ ವಿಷಯವಾಗಿದೆ. ಮುಖ್ಯಮಂತ್ರಿಯವರು ಈ ಸಂಗತಿಯನ್ನು ಲೀಗಲ್ ಟೀಮ್ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಸಿ ಒಂದು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ ಸಚಿವ, ಬಿಜೆಪಿಯವರಿಗೆ ಉತ್ತರಿಸುವ ಅವಶ್ಯಕತೆ ತಮಗಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

