ಹಾಸನ ಮತ್ತು ಮಂಡ್ಯ ಯಾವತ್ತಿಗೂ ಜೆಡಿಎಸ್ ಭದ್ರಕೋಟೆಗಳು: ಎಸ್ ಎಲ್ ಭೋಜೇಗೌಡ, ಜೆಡಿಎಸ್ ಎಮ್ಮೆಲ್ಸಿ

|

Updated on: Jan 10, 2024 | 4:42 PM

ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನಿಖಿಲ್ ಕುಮಾರಸ್ವಾಮಿ ಸೋತರೂ 2019ರಲ್ಲಿ ಗೆದ್ದಿದ್ದ ಪುಟ್ಟಸ್ವಾಮಿ ಅವರಿಗಿಂತ ಸುಮಾರು 70,000 ವೋಟು ಹೆಚ್ಚು ಪಡೆದಿದ್ದರು ಎಂದರು. ಜೆಡಿಎಸ್ ಗೆ ಯಾವ್ಯಾವ ಕ್ಷೇತ್ರಗಳು ಬಿಟ್ಟುಕೊಡಬೇಕೆಂದು ಪಕ್ಷದ ವರಿಷ್ಠರು ಬಿಜೆಪಿ ನಾಯಕರ ಜೊತೆ ಇನ್ನೂ ಮಾತಾಡಿಲ್ಲ, ಆದರೆ ಪಕ್ಷಕ್ಕೆ ಭದ್ರಕೋಟೆ ಅನಿಸಿರುವ ಕ್ಷೇತ್ರಗಳಿಗಾಗಿ ಬೇಡಿಕೆಯಂತೂ ಸಲ್ಲಿಸಲಾಗುವುದು ಎಂದು ಭೋಜೇಗೌಡ ಹೇಳಿದರು.

ಚಿಕ್ಕಮಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha polls) ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡಿಲ್ಲ, ಅದರೆ ಪಕ್ಷದ ಕಾರ್ಯಕರ್ತರು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸೋತ ಶಾಸಕರು ಒತ್ತಾಯ ಮಾಡುತ್ತಿದ್ದಾರೆ ಎಂದು ಪಕ್ಷದ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ (SL Bhojegowda) ಹೇಳಿದರು. ಜಿಲ್ಲೆಯ ಹೊಸಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮಂಡ್ಯ ಮತ್ತು ಹಾಸನ ಯಾವತ್ತಿಗೂ ಜೆಡಿಎಸ್ ಭದ್ರಕೋಟೆಗಳು, ಕಳೆದ ವಿಧಾನ ಸಭಾ ಚುನಾವಣೆ ಮತ್ತು ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಸೋತಿರಬಹುದು, ಅದು ಬೇರೆ ವಿಚಾರ ಎಂದು ಹೇಳಿದ ಭೋಜೇಗೌಡ, ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನಿಖಿಲ್ ಕುಮಾರಸ್ವಾಮಿ ಸೋತರೂ 2019ರಲ್ಲಿ ಗೆದ್ದಿದ್ದ ಪುಟ್ಟಸ್ವಾಮಿ ಅವರಿಗಿಂತ ಸುಮಾರು 70,000 ವೋಟು ಹೆಚ್ಚು ಪಡೆದಿದ್ದರು ಎಂದರು. ಜೆಡಿಎಸ್ ಗೆ ಯಾವ್ಯಾವ ಕ್ಷೇತ್ರಗಳು ಬಿಟ್ಟುಕೊಡಬೇಕೆಂದು ಪಕ್ಷದ ವರಿಷ್ಠರು ಬಿಜೆಪಿ ನಾಯಕರ ಜೊತೆ ಇನ್ನೂ ಮಾತಾಡಿಲ್ಲ, ಆದರೆ ಪಕ್ಷಕ್ಕೆ ಭದ್ರಕೋಟೆ ಅನಿಸಿರುವ ಕ್ಷೇತ್ರಗಳಿಗಾಗಿ ಬೇಡಿಕೆಯಂತೂ ಸಲ್ಲಿಸಲಾಗುವುದು ಎಂದು ಭೋಜೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on