ಲೋಕಾಯುಕ್ತ ಅಧಿಕಾರಿಗಳನ್ನೇ 4 ಗಂಟೆ ಕಾಯಿಸಿ ಮನೆ ಬಾಗಿಲು ತೆರೆದ ಹಾಸನ ಮಹಾನಗರಪಾಲಿಕೆ ಇಂಜಿನಿಯರ್!

Edited By:

Updated on: Mar 05, 2026 | 11:42 AM

ಹಾಸನ ಮಹಾನಗರಪಾಲಿಕೆಯ ಇಂಜಿನಿಯರ್ ಸತ್ಯನಾರಾಯಣ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬೆಳಗ್ಗೆ 5:30ಕ್ಕೆ ದಾಳಿ ನಡೆಸಿದ ಅಧಿಕಾರಿಗಳಿಗೆ ಬಾಗಿಲು ತೆರೆಯಲು ಸತ್ಯನಾರಾಯಣ್ 4 ಗಂಟೆಗಳ ಕಾಲ ವಿಳಂಬ ಮಾಡಿದ್ದಾರೆ. ಪೊಲೀಸರ ನೆರವಿನೊಂದಿಗೆ ಅಧಿಕಾರಿಗಳು ಅಂತಿಮವಾಗಿ ಮನೆ ಪ್ರವೇಶಿಸಿ ಪರಿಶೀಲನೆ ಆರಂಭಿಸಿದ್ದಾರೆ.

ಹಾಸನ, ಮಾರ್ಚ್​​ 05: ಮನೆ ಮೇಲೆ ದಾಳಿ ನಡೆಸಲು ಬಂದಿದ್ದ ಲೋಕಾಯುಕ್ತ ಸಿಬ್ಬಂದಿಯನ್ನೇ ಅಧಿಕಾರಿಯೋರ್ವ ನಾಲ್ಕು ಗಂಟೆ ಕಾಯಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಮಹಾನಗರಪಾಲಿಕೆ ಇಂಜಿನಿಯರ್ ಸತ್ಯನಾರಾಯಣ ಅವರ ರಕ್ಷಣಾಪುರಂ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದರು. ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು, ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಬೆಳಗ್ಗೆ 5:30ಕ್ಕೆ ಲೋಕಾಯುಕ್ತ ತಂಡ ಆಗಮಿಸಿತ್ತು. ಆದರೆ ಸತ್ಯನಾರಾಯಣ್ ಅವರು ಬಾಗಿಲು ತೆರೆಯಲು ನಿರಾಕರಿಸಿದ್ದರಿಂದ ಸುಮಾರು ಗಂಟೆಗಳ ಕಾಲ ಹೈಡ್ರಾಮಾ ನಡೆದಿದೆ.  ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಕುಮಾರ್ ಮತ್ತು ಇನ್ಸ್‌ಪೆಕ್ಟರ್ ಶಿಲ್ಪಾ ನೇತೃತ್ವದಲ್ಲಿ ತಂಡ ಮನೆ ಮುಂದೆ ಕಾದು ಕುಳಿತಿದ್ದು, ಅಧಿಕಾರಿಗಳು ನಿರಂತರವಾಗಿ ಮನವಿ ಮಾಡಿದರೂ ಸತ್ಯನಾರಾಯಣ ಮನೆ ಬಾಗಿಲು ತೆರೆಯಲಿಲ್ಲ. ಅಧಿಕಾರಿಗಳನ್ನು ದೀರ್ಘ ಕಾಲ ಕಾಯಿಸಿದ ಬಳಿಕ ಅಂತಿಮವಾಗಿ ಮನೆಯ ಡೋರ್​​ ಓಪನ್​​ ಮಾಡಲಾಗಿದ್ದು, ಮನೆಯೊಳಗೆ ಎಂಟ್ರೀ ಕೊಟ್ಟಿರುವ ಲೋಕಾಯುಕ್ತ ಟೀಂ ಆಸ್ತಿ ದಾಖಲೆಗಳು, ಆದಾಯ ಮತ್ತು ಸಂಪಾದಿಸಿದ ಆಸ್ತಿಗಳ ಪರಿಶೀಲನೆ ನಡೆಸುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More