ವೈದ್ಯನ ಮಹಾ ಎಡವಟ್ಟು; ಎಡಗಾಲು ನೋವಿಗೆ ಬಲಗಾಲಿಗೆ ಆಪರೇಷನ್
ಎಡಗಾಲಿನ ನೋವಿಗೆ ಚಿಕಿತ್ಸೆ ಪಡೆಯಲು ಹೋದ ಮಹಿಳೆಗೆ ಎಡಗಾಲಿನ ಬದಲಿಗೆ ವೈದ್ಯನೊಬ್ಬ ಬಲಗಾಲಿಗೆ ಆಪರೇಷನ್ ಮಾಡಿದ ಘಟನೆ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಎರಡು ವರ್ಷಗಳ ಹಿಂದೆ ಆ ಮಹಿಳೆಯ ಎಡಗಾಲಿಗೆ ರಾಡ್ ಅಳವಡಿಸಲಾಗಿತ್ತು. ಆದರೆ ಈಗ ಆ ಎಡಗಾಲಿನಲ್ಲಿ ನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ್ರೆ ವೈದ್ಯ ಎಡಗಾಲು ಬದಲಿಗೆ ಬಲಗಾಲನ್ನು ಕೊಯ್ದಿದ್ದಾನೆ.
ಹಾಸನ, ಸೆಪ್ಟೆಂಬರ್ 23: ವೈದ್ಯರ (Doctors) ಎಡವಟ್ಟುಗಳಿಗೆ ಸಂಬಂಧಿಸಿದ ಒಂದಲ್ಲಾ ಒಂದು ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ಹಾಸನದಲ್ಲೂ ಇಂತಹದ್ದೇ ಘಟನೆ ನಡೆದಿದ್ದು, ಜಿಲ್ಲಾಸ್ಪತ್ರೆಯ ವೈದ್ಯನೊಬ್ಬ ಮಹಿಳೆಯೊಬ್ಬರ ಎಡಗಾಲಿನ ನೋವಿಗೆ ಬಲಗಾಲಿಗೆ ಆಪರೇಷನ್ ಮಾಡಿದ್ದಾನೆ. ಎರಡು ವರ್ಷಗಳ ಹಿಂದೆ ಅಪಘಾತದ ಹಿನ್ನೆಲೆ ಜ್ಯೋತಿ ಎನ್ನುವವರ ಎಡಗಾಲಿಗೆ ರಾಡ್ ಅಳವಡಿಸಲಾಗಿತ್ತು. ಆದರೆ ಇದೀಗ ಆ ಕಾಲಿನಲ್ಲಿ ನೋವು ಕಾಣಿಸಿಕೊಂಡ ಕಾರಣ ಅವರು ಕಾಲಿಗೆ ಹಾಕಿದ್ದ ರಾಡ್ ತೆಗೆಯುವ ಸಲುವಾಗಿ ಆಸ್ಪತ್ರೆಗೆ ಬಂದಿದ್ದಾರೆ. ಆದ್ರೆ ವೈದ್ಯ ಸಂತೋಷ್ ಎಡಗಾಲಿನ ಬದಲಿಗೆ ಬಲಗಾಲನ್ನು ಕೊಯ್ದು ಮಹಾ ಎಡವಟ್ಟು ಮಾಡಿದ್ದಾನೆ. ತಪ್ಪಿನ ಅರಿವಾಗಿ ವೈದ್ಯ ಬಳಿಕ ಎಡಗಾಲಿನ ರಾಡ್ ತೆಗೆದಿದ್ದು, ವೈದ್ಯನ ನಿರ್ಲಕ್ಷ್ಯಕ್ಕೆ ಜ್ಯೋತಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

