ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಎರಡು ಬ್ಯಾಗ್ನಲ್ಲಿ ಬಂತು ಸ್ಪೆಷಲ್ ಊಟ
ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಸಿಲುಕೊಂಡಿದ್ದು,ಇದೀಗ ಅವರು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸ್ಪೆಷಲ್ ಊಟ ಬಂದಿದೆ. ಪರಪ್ಪನ ಅಗ್ರಹಾರ ಜೈಲಿನ ವಿಶೇಷ ಭದ್ರತಾ ಬ್ಯಾರಕ್ನಲ್ಲಿರುವ ಪ್ರಜ್ವಲ್ಗೆ ವ್ಯಕ್ತಿಯೋರ್ವ, ಎರಡು ಬ್ಯಾಗ್ಗಳಲ್ಲಿ ಊಟ ತಂದು ಕೊಟ್ಟಿದ್ದಾರೆ.
ಬೆಂಗಳೂರು, (ಜುಲೈ 16): ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲುಪಾಲಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸ್ಪೆಷಲ್ ಊಟ ಬಂದಿದೆ. ವ್ಯಕ್ತಿಯೋರ್ವ ಎರಡು ಬ್ಯಾಗ್ಗಳಲ್ಲಿ ಪ್ರಜ್ವಲ್ ರೇವಣ್ಣಗೆ ಮನೆಯಿಂದ ಊಟ ತಂದು ಕೊಟ್ಟಿದ್ದಾರೆ. 1 ತಿಂಗಳು ಮನೆಯ ಊಟ ನೀಡಲು ಕೋರ್ಟ್ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು (ಜುಲೈ 16) ಪ್ರಜ್ವಲ್ಗೆ ಮಧ್ಯಾಹ್ನಕ್ಕೆ ಮನೆಯಿಂದ ಊಟ ಬಂದಿದೆ. ಹೌದು… ಪರಪ್ಪನ ಅಗ್ರಹಾರ ಜೈಲಿನ ವಿಶೇಷ ಭದ್ರತಾ ಬ್ಯಾರಕ್ನಲ್ಲಿರುವ ಪ್ರಜ್ವಲ್ ಅವರಿಗೆ ವ್ಯಕ್ತಿಯೋರ್ವ ಮನೆಯಿಂದ ಎರಡು ಬ್ಯಾಗ್ಗಳಲ್ಲಿ ಊಟ ತಂದು ನೀಡಿದ್ದಾನೆ. ಇನ್ನು ಅಸಹಜ ಲೈಂಗಿಕ ಕಿರುಕುಳ ಕೇಸ್ನಲ್ಲಿ ಜೈಲು ಸೇರಿರುವ ಸೂರಜ್ ಸಹ ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಪ್ರಜ್ವಲ್ ಹಾಗೂ ಸೂರಜ್ ಅಣ್ಣ ತಮ್ಮ ಅಕ್ಕಪಕ್ಕದ ಕೊಠಡಿಯಲ್ಲಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
