ಪತಿ ಅಂದ್ರೆ ಒಲ್ಲೆ, ಪ್ರಿಯಕರನ ಜೊತೆ ಲಲ್ಲೆ! ಗಂಡನಿಂದ ದೂರವಾಗಲು ಅತ್ಯಾಚಾರದ ರೀತಿ ಕಥೆ ಕಟ್ಟಿದ್ದ ಖತರ್ನಾಕ್ ಲೇಡಿ

Edited By:

Updated on: Feb 16, 2026 | 12:42 PM

ಹಾಸನದಿಂದ ನಾಪತ್ತೆಯಾಗಿದ್ದ ಪ್ರಿಯಾಂಕಾ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಆರಂಭದಲ್ಲಿ ಕೆರೆ ಬಳಿ ಬಟ್ಟೆ ಪತ್ತೆಯಾಗಿ ಅತ್ಯಾಚಾರ ಹಾಗೂ ಕೊಲೆಯಾಗಿರುವ ಶಂಕೆ ಮೂಡಿತ್ತು. ಆದರೆ, ಪೊಲೀಸರ ತನಿಖೆಯಿಂದ ಆಕೆ ತನ್ನ ಪ್ರಿಯಕರ ಡೇವಿಡ್ ಜೊತೆ ಕುಣಿಗಲ್‌ನಲ್ಲಿ ಪತ್ತೆಯಾಗಿದ್ದಾಳೆ. ಪತಿಯನ್ನು ತೊರೆದು ಪ್ರಿಯಕರನೊಂದಿಗೆ ಹೋಗಲು ಅಪಹರಣ ನಾಟಕ ಸೃಷ್ಟಿಸಿದ್ದು ಬಯಲಾಗಿದೆ.

ಹಾಸನ, ಫೆಬ್ರವರಿ 16: ಹಾಸನ ಜಿಲ್ಲೆಯ ಬೇಲೂರಿನಿಂದ ದಿಢೀರ್ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕಾ ಪ್ರಕರಣಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಫೆಬ್ರವರಿ 12ರಂದು ಮದುವೆಗೆಂದು ತೆರಳಿದ್ದ ಪ್ರಿಯಾಂಕಾ ವಾಪಸ್ ಬಂದಿರಲಿಲ್ಲ. ಪತಿ ರುದ್ರೇಶ್ ನೀಡಿದ ದೂರಿನನ್ವಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ, ಹಾಸನ ತಾಲೂಕಿನ ಕಲ್ಕೆರೆ ಬಳಿ ಪ್ರಿಯಾಂಕಾ ಅವರ ಬಟ್ಟೆಗಳು, ಒಳಉಡುಪು, ಬ್ಯಾಗ್ ಹಾಗೂ ಚಪ್ಪಲಿ ಪತ್ತೆಯಾಗಿದ್ದವು. ಇದರಿಂದ ರೇಪ್ ಮತ್ತು ಕೊಲೆಯ ಶಂಕೆ ವ್ಯಕ್ತವಾಗಿತ್ತು.

ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಕಾಲ್ ಡಿಟೇಲ್ಸ್ ಪರಿಶೀಲಿಸಿದಾಗ, ಪ್ರಿಯಾಂಕಾ ಬೈಕ್‌ನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ತೆರಳುತ್ತಿರುವುದು ಕಂಡುಬಂದಿತ್ತು. ಈ ಸುಳಿವಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು, ಕುಣಿಗಲ್ ತಾಲೂಕಿನ ಗೊಟ್ಟಿಕೆರೆ ಗ್ರಾಮದ ಡೇವಿಡ್ ಎಂಬಾತನ ಮನೆಯಲ್ಲಿ ಪ್ರಿಯಾಂಕಾರನ್ನು ಪತ್ತೆ ಮಾಡಿದ್ದಾರೆ. ತುಮಕೂರಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾಂಕಾ, ಸಹೋದ್ಯೋಗಿ ಡೇವಿಡ್‌ನನ್ನು ಪ್ರೀತಿಸುತ್ತಿದ್ದಳು. ಪತಿಯನ್ನು ತೊರೆದು ಪ್ರಿಯಕರನೊಂದಿಗೆ ಹೋಗಲು ಅತ್ಯಾಚಾರ, ಅಪಹರಣ ನಡೆದಿದೆ ಎಂಬಂಥ ನಾಟಕ ಸೃಷ್ಟಿಸಿದ್ದಾಳೆ ಎಂದು ತಿಳಿದುಬಂದಿದೆ. ಪ್ರಿಯಾಂಕಾ ಸದ್ಯ ಪೊಲೀಸರ ಸುಪರ್ದಿಯಲ್ಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 16, 2026 09:43 AM