ಹಾಸನಾಂಬೆ ದರ್ಶನಕ್ಕೆ ಮಳೆ ಅಡ್ಡಿ: ದಿಢೀರ್ ಸುರಿದ ಮಳೆಗೆ ಹೈರಾಣಾದ ಭಕ್ತರು
ಹಾಸನಾಂಬೆಯ ಮೂರನೇ ದಿನದ ಸಾರ್ವಜನಿಕ ದರ್ಶನಕ್ಕೆ ಇಂದು ಭಕ್ತಸಾಗರವೇ ಹರಿದು ಬಂದಿತ್ತು. ಭಾನುವಾರದ ರಜೆಯ ಕಾರಣದಿಂದ ರಾಜ್ಯದ ಮೂಲೆ ಮೂಲೆಗಳಿಂದಲೂ ಹಾಸನದತ್ತ ಭಕ್ತ ಸಮೂಹ ಲಗ್ಗೆಯಿಟ್ಟಿತ್ತು. ಆದರೆ ಮಧ್ಯಾಹ್ನದ ವೇಳೆಗೆ ದಿಢೀರ್ ಮಳೆ ಸುರಿದ ಪರಿಣಾಮ ಭಕ್ತರು ಹೈರಾಣಾಗಿದ್ದಾರೆ.
ಹಾಸನ, ನವೆಂಬರ್ 05: ಬೇಡಿದ ವರವ ಕರುಣಿಸುವ, ಕಷ್ಟಗಳನ್ನ ನಿವಾರಣೆ ಮಾಡುವ, ವರ್ಷಕ್ಕೊಮ್ಮೆ ದರ್ಶನ ಕರುಣಿಸೋ ಶಕ್ತಿದೇವತೆ ಹಾಸನಾಂಬೆಯ (Hassanambe) ಮೂರನೇ ದಿನದ ಸಾರ್ವಜನಿಕ ದರ್ಶನಕ್ಕೆ ಇಂದು ಭಕ್ತಸಾಗರವೇ ಹರಿದು ಬಂದಿತ್ತು. ಭಾನುವಾರದ ರಜೆಯ ಕಾರಣದಿಂದ ರಾಜ್ಯದ ಮೂಲೆ ಮೂಲೆಗಳಿಂದಲೂ ಹಾಸನದತ್ತ ಭಕ್ತ ಸಮೂಹ ಲಗ್ಗೆಯಿಟ್ಟಿತ್ತು. ಆದರೆ ಮಧ್ಯಾಹ್ನದ ವೇಳೆಗೆ ದಿಢೀರ್ ಮಳೆ ಸುರಿದ ಪರಿಣಾಮ ಭಕ್ತರು ಹೈರಾಣಾಗಿದ್ದಾರೆ. ದೇಗುಲದ ಆವರಣದಲ್ಲಿ ನಿಂತಿದ್ದ ಕೆಲ ಭಕ್ತರಿಗೆ ಮಳೆಯಿಂದಾಗಿ ದರ್ಶನಕ್ಕೆ ಅಡ್ಡಿಯಾಗಿದೆ. ನೈವೇದ್ಯಕ್ಕಾಗಿ ದರ್ಶನ ಸ್ಥಗಿತವಾಗಿದ್ದ ಸಂದರ್ಭದಲ್ಲಿ ದಿಢೀರ್ ಮಳೆ ಸುರಿದಿದೆ. ಮಳೆಯನ್ನು ಲೆಕ್ಕಿಸದೆ ಹಾಸನಾಂಬೆ ದರ್ಶನಕ್ಕೆ ಭಕ್ತರು ಕಾಯುತ್ತಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.