ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು ಮತಗಟ್ಟೆ; ಮತದಾನದಿಂದ ಭೇಟಿಯಾದ ಬಾಲ್ಯದ ಗೆಳತಿಯರು
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು(ಏ.26) ರಾಜ್ಯದ 14 ಕ್ಷೇತ್ರಗಳಲ್ಲಿ ಭರ್ಜರಿಯಾಗಿ ನಡೆದಿದೆ. ಈ ಮಧ್ಯೆ ಹಾಸನ (Hassan) ಜಿಲ್ಲೆಯಲ್ಲೊಂದು ಅಪರೂಪದ ಪ್ರಸಂಗ ನಡೆದಿದ್ದು, ಬಹಳ ವರ್ಷಗಳ ನಂತರ ಬಾಲ್ಯದ ಗೆಳತಿಯರು ಭೇಟಿಯಾಗಿದ್ದಾರೆ. ಕೂಡಲೇ ಇಬ್ಬರು ಸಂತಸದಿಂದ ತಬ್ಬಿಕೊಳ್ಳುವ ಮೂಲಕ ಗುಳಗಳಲೆ ಗ್ರಾಮದ ಮತಗಟ್ಟೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.
ಹಾಸನ, ಏ.26: ಹಾಸನ(Hassan) ಜಿಲ್ಲೆಯಲ್ಲೊಂದು ಅಪರೂಪದ ಪ್ರಸಂಗ ನಡೆದಿದ್ದು, ಬಹಳ ವರ್ಷಗಳ ನಂತರ ಬಾಲ್ಯದ ಗೆಳತಿಯರು ಭೇಟಿಯಾಗಿದ್ದಾರೆ. ಹೌದು, ಗುಳಗಳಲೆ ಗ್ರಾಮದ ಮತಗಟ್ಟೆಗೆ ಮತದಾನ ಮಾಡಲು ಬಂದಾಗ ಜಾನಮ್ಮ (94) ಮತ್ತು ಫಾತಿಮಾ (93) ದಶಕಗಳ ನಂತರ ಮುಖಾಮುಖಿಯಾಗಿದ್ದಾರೆ. ಕೂಡಲೇ ಇಬ್ಬರು ಸಂತಸದಿಂದ ತಬ್ಬಿಕೊಳ್ಳುವ ಮೂಲಕ ಗುಳಗಳಲೆ ಗ್ರಾಮದ ಮತಗಟ್ಟೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಮದುವೆಯಾದ ನಂತರ ಇಂದು ಇಬ್ಬರು ಇದೇ ಮೊದಲ ಬಾರಿಗೆ ಭೇಟಿಯಾಗಿ ಗೆಳತಿಯರಿಬ್ಬರು ಖುಷಿಪಟ್ಟರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos