ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!

Edited By:

Updated on: Apr 04, 2025 | 8:29 AM

ಹಾಸನದಲ್ಲಿ ಗುರುವಾರ ಭಾರಿ ಮಳೆಯಾಗಿದ್ದರಿಂದ ಹಾಸನ ರೈಲ್ವೆ ನಿಲ್ದಾಣದ ಮೇಲ್ಚಾವಣಿಯಿಂದ ನೀರು ಸೋರುತ್ತಿತ್ತು. ಇದರಿಂದ ರೈಲು ನಿಲ್ದಾಣ ಸಂಪೂರ್ಣ ಜಲಾವೃತವಾಗಿತ್ತು. ಮಳೆ ನೀರಿನಲ್ಲೇ ರೈಲಿಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂತು. ರೈಲು ನಿಲ್ದಾಣದ ಅವ್ಯವಸ್ಥೆ ಬಗ್ಗೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ. ರೈಲು ನಿಲ್ದಾಣದ ವಿಡಿಯೋ ಇಲ್ಲಿದೆ.

ಹಾಸನ, ಏಪ್ರಿಲ್ 4: ಹಾಸನ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಆಗುತ್ತದೆ. ಗುರುವಾರ ಸಂಜೆ ಮತ್ತು ರಾತ್ರಿ ಹಾಸನ ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾರಿ ಮಳೆಯಾಗಿದೆ. ವರ್ಷಧಾರೆಯಿಂದ ಹಾಸನ ರೈಲು ನಿಲ್ದಾಣದಲ್ಲಿ ಮೇಲ್ಚಾವಣಿ ಸೋರುತ್ತಿತ್ತು. ಇದರಿಂದಾಗಿ, ರೈಲು ನಿಲ್ದಾಣದ ಒಳಗೆಲ್ಲ ನೀರು ತುಂಬಿಕೊಂಡು ಪ್ರಯಾಣಿಕರು ಪರದಾಡುವಂತಾಯಿತು. ರೈಲು ನಿಲ್ದಾಣದ ವಿಡಿಯೋ ಇಲ್ಲಿದೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ