ಹಾಸನ: ಹಬ್ಬದ ದಿನವೇ ಕಾರಿನಲ್ಲಿ ಪ್ರತ್ಯಕ್ಷವಾದ ನಾಗಪ್ಪ; ಇಲ್ಲಿದೆ ವಿಡಿಯೋ

Edited By: ಕಿರಣ್ ಹನುಮಂತ್​ ಮಾದಾರ್

Updated on: Apr 09, 2024 | 2:40 PM

ಹಾಸನ ಜಿಲ್ಲೆಯ ಆಲೂರು(Alur) ತಾಲ್ಲೂಕಿನ ವಾತನಹಳ್ಳಿಪುರ ಗ್ರಾಮದ ಯದುಕುಮಾರ್ ಎಂಬುವವರಿಗೆ ಸೇರಿದ ಸ್ವಿಫ್ಟ್ ಕಾರಿನ ಇಂಜಿನಲ್ಲಿ ಬಿಸಿಲಿನ ತಾಪ ತಾಳಲಾರದೆ  ಅಡಗಿದ್ದ ನಾಗರ ಹಾವನ್ನು(Cobra) ಸೆರೆ ಹಿಡಿಯಲಾಗಿದೆ. ಕಾರಿನೊಳಗಿಂದ ಬರುತ್ತಿದ್ದ ಶಬ್ದವನ್ನ ಕೇಳಿ ಪರಿಶೀಲನೆ ನಡೆಸಿದಾಗ ನಾಗರ ಹಾವು ಪತ್ತೆಯಾಗಿದೆ.

ಹಾಸನ, ಏ.09: ಯುಗಾದಿ ಹಬ್ಬದ ದಿನವೇ ಮನೆಯ ಕಾರಿನಲ್ಲಿ ನಾಗಪ್ಪ ಪ್ರತ್ಯಕ್ಷವಾಗಿದ್ದಾನೆ. ಹೌದು, ಹಾಸನ ಜಿಲ್ಲೆಯ ಆಲೂರು(Alur) ತಾಲ್ಲೂಕಿನ ವಾತನಹಳ್ಳಿಪುರ ಗ್ರಾಮದ ಯದುಕುಮಾರ್ ಎಂಬುವವರಿಗೆ ಸೇರಿದ ಸ್ವಿಫ್ಟ್ ಕಾರಿನ ಇಂಜಿನಲ್ಲಿ ಬಿಸಿಲಿನ ತಾಪ ತಾಳಲಾರದೆ  ಅಡಗಿದ್ದ ನಾಗರ ಹಾವನ್ನು(Cobra) ಸೆರೆ ಹಿಡಿಯಲಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಹಾವು ಅಡಗಿ ಕುಳಿತಿತ್ತು. ಕಾರಿನೊಳಗಿಂದ ಬರುತ್ತಿದ್ದ ಶಬ್ದವನ್ನ ಕೇಳಿ ಪರಿಶೀಲನೆ ನಡೆಸಿದಾಗ ನಾಗರ ಹಾವು ಪತ್ತೆಯಾಗಿದೆ. ಕೂಡಲೇ ಹತ್ತಿರದ ಉರಗತಜ್ಞ ಸ್ನೇಕ್ ಬಾಬುಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಉರಗ ತಜ್ಞ ಸ್ನೇಕ್ ಬಾಬು ಅವರು ಹಾವನ್ನು ರಕ್ಷಿಸಿ ಆಲೂರಿನ ಕಾಡಿಗೆ ಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact

TV9 Kannada

Read More