Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ 28 ಸ್ಥಾನಗಳನ್ನು ಜಯಿಸಿ ಗೆದ್ದವರೊಂದಿಗೆ ದೆಹಲಿಗೆ ಬರುವ ಭರವಸೆ ಅಮಿತ್ ಶಾಗೆ ನೀಡಿದ್ದೇನೆ: ಬಿಎಸ್ ಯಡಿಯೂರಪ್ಪ

ಎಲ್ಲ 28 ಸ್ಥಾನಗಳನ್ನು ಜಯಿಸಿ ಗೆದ್ದವರೊಂದಿಗೆ ದೆಹಲಿಗೆ ಬರುವ ಭರವಸೆ ಅಮಿತ್ ಶಾಗೆ ನೀಡಿದ್ದೇನೆ: ಬಿಎಸ್ ಯಡಿಯೂರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 09, 2024 | 1:30 PM

ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 14 ರಂದು ಮಂಗಳೂರಲ್ಲಿ ರೋಡ್ ಶೋ ಮಾಡಲಿದ್ದಾರೆ, ಬೆಂಗಳೂರಲ್ಲೂ ಮಾಡಬಹುದು ಎಂದ ಯಡಿಯೂರಪ್ಪ ಬರ ಪರಿಹಾರ ನಿಧಿಯ ಬಗ್ಗೆ ಮಾತಾಡಲು ಇದು ಸೂಕ್ತ ಸಮಯವಲ್ಲ, ಚುನಾವಣೆಯ ನಂತರ ಮಾತಾಡುವುದಾಗಿ ಹೇಳಿದರು. 28 ಸ್ಥಾನ ಗೆಲ್ಲೋದು ಕನಸು ಅಂತ ಕಾಂಗ್ರೆಸ್ ನಾಯಕರು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಅದನ್ನೇ ಹೇಳುತ್ತಾರೆ, ಬೇರೇನಿದೆ ಅವರಲ್ಲಿ ಹೇಳೋದಿಕ್ಕೆ ಎಂದರು.

ಬೆಂಗಳೂರು: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa), ರಾಜ್ಯದ ಬಿಜೆಪಿ ನಾಯಕರಲ್ಲಿ ಈಗ ಯಾವುದೇ ಅಸಮಾಧಾನವಿಲ್ಲ, ಎಲ್ಲರನ್ನೂ ಕರೆಸಿ ಅವರವರ ಸಮಸ್ಯೆಗಳನ್ನು ಬಗೆಹರಿಸಿದ್ದಾಗಿ ಹೇಳಿದರು. ರಾಜ್ಯ ಮತ್ತು ದೇಶದೆಲ್ಲೆಡೆ ಬಿಜೆಪಿ ಪರ ಉತ್ತಮ ವಾತಾವರಣವಿದೆ, 400 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಳ್ಳಲಾಗಿದೆ, ಕರ್ನಾಟಕದ ಎಲ್ಲ 28 ಸ್ಥಾನಗಳನ್ನು ಜಯಿಸಿ ಗೆದ್ದವರನ್ನು ದೆಹಲಿಗೆ ಕರೆದುಕೊಂಡು ಬರುವುದಾಗಿ ಅಮಿತ್ ಶಾ (Amit Shah) ಅವರಿಗೆ ಭರವಸೆ ನೀಡಿದ್ದೇನೆ, ಜನರ ಬೆಂಬಲ ನಮ್ಮೊಂದಿಗಿದೆ, ದೇವರ ಕೃಪೆ ನಮ್ಮ ಮೇಲಿದೆ ಮತ್ತು ಎಲ್ಲೆಡೆ ಮೋದಿ ಅಲೆ (Modi wave) ಇದೆ ಎಂದು ಯಡಿಯೂರಪ್ಪ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 14 ರಂದು ಮಂಗಳೂರಲ್ಲಿ ರೋಡ್ ಶೋ ಮಾಡಲಿದ್ದಾರೆ, ಬೆಂಗಳೂರಲ್ಲೂ ಮಾಡಬಹುದು ಎಂದ ಯಡಿಯೂರಪ್ಪ ಬರ ಪರಿಹಾರ ನಿಧಿಯ ಬಗ್ಗೆ ಮಾತಾಡಲು ಇದು ಸೂಕ್ತ ಸಮಯವಲ್ಲ, ಚುನಾವಣೆಯ ನಂತರ ಮಾತಾಡುವುದಾಗಿ ಹೇಳಿದರು. 28 ಸ್ಥಾನ ಗೆಲ್ಲೋದು ಕನಸು ಅಂತ ಕಾಂಗ್ರೆಸ್ ನಾಯಕರು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಅದನ್ನೇ ಹೇಳುತ್ತಾರೆ, ಬೇರೇನಿದೆ ಅವರಲ್ಲಿ ಹೇಳೋದಿಕ್ಕೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರಧಾನಿ ಮೋದಿ ಕೇವಲ ರೂ. 29/ಕೆಜಿ ಸಿಗುವ ಭಾರತ್ ಬ್ರ್ಯಾಂಡ್ ಅಕ್ಕಿ ಲಾಂಚ್ ಮಾಡಿದ್ದು ಐತಿಹಾಸಿಕ ನಿರ್ಣಯ: ಬಿಎಸ್ ಯಡಿಯೂರಪ್ಪ